

ಕಡೂರು: ಪಟ್ಟಣದ ಲಕ್ಷ್ಮೀಶ ನಗರದ ಮನೆಯಲ್ಲಿ ಆ.10ರಂದು ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ 17.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ತ್ಯಾಗರಾಜ ನಗರದ ವಾಸಿ ಕೆ.ಎನ್.ವಿರೂಪಾಕ್ಷಪ್ಪ ಬಂಧಿತ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಪಿಐ ರಫೀಕ್, ಪಿಎಸ್‌ಐಗಳಾದ ಜಿ.ಆರ್.ಸಜಿತ್‌ಕುಮಾರ್, ಡಿ.ಎಚ್.ಧನಂಜಯ, ಲೀಲಾವತಿ, ಸಿಬ್ಬಂದಿ ಮಧುಕುಮಾರ್, ಹರೀಶ, ಸ್ವಾಮಿ, ಮಹಮ್ಮದ್ ರಿಯಾಜ್, ಧನಪಾಲನಾಯ್ಕ, ಪರಮೇಶ್ವರನಾಯ್ಕ ಮತ್ತಿತರರಿದ್ದರು.