

ಚಾಮರಾಜನಗರ: ಪೂಜೆ ಮಾಡಿದರೇ ಏಳಿಗೆಯಾಗುತ್ತದೆ ಎಂದು ನಂಬಿಸಿ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಕುದೇರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಮೂಕಹಳ್ಳಿ ಕಾಲೋನಿ ನಿವಾಸಿ ಮುತ್ತಣ್ಣ (35) ಬಂಧಿತ ಆರೋಪಿ. ಈತ ಆ.10 ರಂದು ಕುದೇರು ಗ್ರಾಮದ ಕಲ್ಯಾಣಕುಮಾರಿ ಎಂಬುವವರ ಮನೆಗೆ ಬಂದು ನೀವು ನಿಮ್ಮಲ್ಲಿರುವ ಚಿನ್ನವನ್ನು ಇಟ್ಟು ಪೂಜೆ ಮಾಡಿದರೇ ಶುಭವಾಗಲಿದೆ ಎಂದು ನಂಬಿಸಿ ಚಿನ್ನಾಭರಣಗಳನ್ನು ಇಟ್ಟು ಪೂಜೆ ಮಾಡಿ, ಹಣೆಗೆ ವಿಭೂತಿಯನ್ನು ಹಚ್ಚಿ ಸಾಂಭ್ರಾಣಿ ಹೊಗೆಯನ್ನು ಹಾಕಿದ್ದನು. ಈ ವೇಳೆ ಕಲ್ಯಾಣಕುಮಾರಿ ಅವರು ಪ್ರಜ್ಞೆ ತಪ್ಪಿದ್ದರು. ಈ ವೇಳೆ ಸುಮಾರು 2.97 ಲಕ್ಷ ರೂ, ಮೌಲ್ಯದ 33 ಗ್ರಾಂ ಚಿನ್ನಾಭರಣ ಹಾಗೂ 15,200 ನಗದು ಹಣವನ್ನು ಕದ್ದುಕೊಂಡು ಪರಾರಿಯಾಗಿದ್ದನು.
ಈ ಸಂಬಂಧ ಕುದೇರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು. ಆ.28 ರಂದು ಎಚ್.ಡಿ.ಕೋಟೆ ಪಟ್ಟಣದ ಕನಕಭವನದಲ್ಲಿ ಆರೋಪಿ ಮುತ್ತಣ್ಣನನ್ನು ಬಂಧಿಸಿದ್ದು, ಸಂತೇಮರಹಳ್ಳಿ ಖಾಸಗಿ ೈನಾನ್ಸ್‌ನಲ್ಲಿ 1 ಲಕ್ಷ ರೂ, ಗೆ ಗಿರಿವಿ ಇಟ್ಟಿದ್ದ ಚಿನ್ನವನ್ನು ಅಮಾನತ್ತುಪಡಿಸಿಕೊಂಡಿದ್ದಾರೆ.