ಚಿನ್ನಾಭರಣ ಕದ್ದವನ ಬಂಧನ

12 p n halli 1]
Published on

ಪಟ್ಟನಾಯಕನಹಳ್ಳಿ: ಮನೆ ಕಳ್ಳತನ ಮಾಡಿ ಚಿನ್ನಾಭರಣ ದೋಚಿದ್ದ ಕಳ್ಳನನ್ನು ಪಟ್ಟನಾಯಕನಹಳ್ಳಿ ಪೊಲೀಸರು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಪಾವಗಡ ತಾಲೂಕಿನ ಯರಪಾಳ್ಯ ಗ್ರಾಮದ ಶ್ರೀನಿವಾಸ್​(30)ಬಂಧಿತ. ಶಿರಾ ತಾಲೂಕಿನ ಚಂಗಾವರ ಗ್ರಾಮದ ಸಿದ್ದಲಿಂಗಮ್ಮ ಎಂಬುವವರ ಮನೆಯಲ್ಲಿ ಹಾಡುಹಗಲೇ ಕಳ್ಳತನ ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಎಸ್ಪಿ ಕೆ.ವಿ.ಅಶೋಕ್​ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್​ ಅಧಿಕ್ಷಕ ವಿ.ಮರಿಯಪ್ಪ ಮತ್ತು ಬಿ.ಎಸ್​.ಅಬ್ದುಲ್​ ಖಾದರ್​ ನೇತೃತ್ವದಲ್ಲಿ ಡಿವೈಎಸ್​ಪಿ ಬಿ.ಕೆ.ಶೇಖರ್​ ಸೂಚನೆ ಮೇರೆಗೆ ಶಿರಾ ಗ್ರಾಮಾಂತರ ವೃತ ನಿರೀಕ್ಷಕ ಕೆ.ಆರ್​.ರಾಘವೇಂದ್ರ, ಪಟ್ಟನಾಯಕನಹಳ್ಳಿ ಪೊಲೀಸ್​ ಠಾಣಾ ಪಿಎಸ್​ಐ ಎನ್​.ಎಂ.ಭವಿತಾ, ಸುಹೇಲ್​ ಅಹಮದ್​, ಸಿಬ್ಬಂದಿ ಹನುಮಂತ ಚಾರ್​, ಗುಂಡ ನಾಯ್ಕ, ಗಣೇಶ್​, ಆರ್​.ಶ್ರೀನಿವಾಸ್​, ನಟರಾಜ ನಾಯಕ, ಜಗದೀಶ್​, ಗೋಪಿನಾಥ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net