ಚಿನ್ನದ ಸರಕ್ಕಾಗಿ ಮಹಿಳೆ ಮೇಲೆ ಹಲ್ಲೆ

Published on

ಕುಣಿಗಲ್​: ತಾಲೂಕಿನ ಬಿಳಿದೇವಾಲಯದ ಬಳಿ ಮಂಗಳವಾರ ಚಿನ್ನದ ಸರ ಕಸಿಯಲು ಹಾಡುಹಗಲೇ ದುಷ್ಕರ್ಮಿಯೊಬ್ಬ ಮಹಿಳೆ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾನೆ. ಕುಣಿಗಲ್​ ಟೌನ್​ ಕೆ.ಆರ್​ ಎಸ್​ ಅಗ್ರಹಾರ ವಾಸಿ ಶ್ವೇತಾ( 39) ಹಲ್ಲೆಗೆ ಒಳಗಾದ ಮಹಿಳೆ.

ಶ್ವೇತಾ, ರೇಷ್ಮೆ ಬಿತ್ತನೆ ಕೊಠಡಿಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಗೆ ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಕಚೇರಿ ಮುಂಭಾಗದಲ್ಲಿ ಅಡ್ಡಗಟ್ಟಿದ ಅಪರಿಚಿತ ಶ್ವೇತಾ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಸಿಯಲು ಯತ್ನಿಸಿದ್ದಾನೆ. ಆದರೆ, ಆಕೆಯ ಕುತ್ತಿಗೆಯಲ್ಲಿ ಕರಿಮಣಿ ಸರ ಮಾತ್ರ ಇರುವುದನ್ನು ಗಮನಿಸಿದ ದುಷ್ಕರ್ಮಿ ನಿರಾಸೆಗೊಂಡ ರಾಡಿನಿಂದ ತಲೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ಮಹಿಳೆ ಆಟೋದಲ್ಲಿ ಬಂದು ಕುಣಿಗಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ನಂತರ ಪೊಲೀಸರು ಆಸ್ಪತ್ರೆಗೆ

ಆಗಮಿಸಿ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net