

ಮೈಸೂರು: ವಿದ್ಯಾರಣ್ಯಪುರಂನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಂದ ಕಳ್ಳನೊಬ್ಬ ಮಹಿಳೆಯ ಚಿನ್ನದ ಸರ ಕಿತ್ತುಕೊಳ್ಳಲು ನಡೆಸಿದ ಯತ್ನ ವಿಫಲವಾಗಿದೆ.
ವಿದ್ಯಾರಣ್ಯಪುರಂನ 4ನೇ ಮೇನ್, 3ನೇ ಕ್ರಾಸ್‌ನಲ್ಲಿ ಗುರುವಾರ ರಾತ್ರಿ 7.45ರಲ್ಲಿ ಸರ ಕೀಳಲು ಯತ್ನಿಸಿದಾಗ ಮಹಿಳೆಯ ಕೊರಳಿಗೆ ಸಣ್ಣ ಗಾಯವಾಗಿದೆ.
ಅತ್ತೆ-ಸೊಸೆ ಅಂಗಡಿಗೆ ಹೋಗಿ 4ನೇ ಮೇನ್ ಮೂಲಕ ಮನೆಗೆ ಹೋಗುತ್ತಿದ್ದರು. ಪಾರ್ಕ್ ಬಳಿ ಹೋಗುತ್ತಿದ್ದಾಗ ಕಳ್ಳನೊಬ್ಬ ಏಕಾಏಕಿ ಅತ್ತೆಯ ಕೊರಳಿನಿಂದ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾನೆ.
ಆದರೆ ಅದೃಷ್ಟವಶಾತ್ ಸರ ತುಂಡಾಗಿ ಒಂದು ಭಾಗ ಕೊರಳಲ್ಲೇ ಉಳಿದರೆ ಮತ್ತೊಂದು ಭಾಗ ನೆಲಕ್ಕೆ ಬಿದ್ದಿದೆ. ಅಷ್ಟರಲ್ಲಿ ಸೊಸೆ ರಕ್ಷಣೆಗೆ ಧಾವಿಸಿದ್ದರಿಂದ ಕಳ್ಳ ಸ್ಥಳದಿಂದ ಬರಿಗೈಯಲ್ಲಿ ಪರಾರಿಯಾಗಿದ್ದಾನೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ವಾರಗಳ ಹಿಂದೆ ಇದೇ ರಸ್ತೆಯಲ್ಲಿ ಸರ ಕಿತ್ತುಕೊಂಡು ಹೋಗಿದ್ದರು. ಈ ಭಾಗದಲ್ಲಿ ಗಸ್ತು ಹೆಚ್ಚಿಸಿ ಮತ್ತೆ ಈ ರೀತಿ ಘಟನೆ ಆಗದಂತೆ ಕ್ರಮ ವಹಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.