ಚಿನ್ನದ ವ್ಯಾಪಾರಿ ಯಾಮಾರಿಸಿದ ಚಾಲಾಕಿ

udp-theft
Published on


ಚನ್ನರಾಯಪಟ್ಟಣ: ಇಲ್ಲಿನ ಬಾಗೂರು ರಸ್ತೆಯಲ್ಲಿರುವ ಭೀಮ ಜೀ ಜ್ಯುವೆಲ್ಲರ್ಸ್‌ನಲ್ಲಿ ಚಿನ್ನ ಖರೀದಿ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿ ಜ್ಯುವೆಲ್ಲರಿ ಮಾಲೀಕರ ಕಣ್ತಪ್ಪಿಸಿ 1,45 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕದ್ದಿರುವ ಘಟನೆ ಗುರುವಾರ ನಡೆದಿದೆ.
ಅಂದಾಜು 30 ವರ್ಷದ ವ್ಯಕ್ತಿ ಚಿನ್ನದ ಮಳಿಗೆಗೆ ಬಂದು 10 ಗ್ರಾಂ ತೂಕದ ಮಾಂಗಲ್ಯ ಸರ ಕೇಳಿದ್ದಾನೆ. ಜ್ಯುವೆಲ್ಲರಿ ಮಾಲೀಖ ರಮೇಶ್ ಕುಮಾರ್ ಅವರು, 10 ಗ್ರಾಂ ಸರ ಇಲ್ಲ, 20 ಗ್ರಾಂ ತೂಕದ ಮಾಂಗಲ್ಯ ಸರ ಇದೆಯೆಂದು ಹೇಳಿದ್ದಾರೆ. ಅದನ್ನೇ ಪ್ಯಾಕ್ ಮಾಡಿ ಜಿಎಸ್‌ಟಿ ಬಿಲ್ ಕೊಡಿ ಎಂದಿದ್ದಾನೆ. ಈ ವೇಳೆ ರಮೇಶ್ ಕುಮಾರ್ ಬಿಲ್ ಬರೆಯುತ್ತಿದ್ದಾಗ ಪ್ಯಾಕ್ ಮಾಡಿದ ಸರವನ್ನು ನೋಡುತ್ತಿರುವಂತೆ ನಾಟಕವಾಡಿ ಖಾಲಿ ಪ್ಯಾಕ್ ಅಲ್ಲಿಯೇ ಬಿಟ್ಟು, ಮೊಬೈಲ್‌ನಲ್ಲಿ ಮಾತನಾಡುವ ಸೋಗಿನಲ್ಲಿ ಅಂಗಡಿಯಿಂದ ಕಾಲ್ಕಿತ್ತಿದ್ದಾನೆ. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net