

ಭಟ್ಕಳ: ದಾಖಲೆ ಇಲ್ಲದ ಚಿನ್ನದ ಬಿಸ್ಕತ್ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಭಟ್ಕಳ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಹುಬ್ಬಳ್ಳಿಯ ದುರ್ಗದ ಬೈಲ್ ನಿವಾಸಿ ಶೈಲೇಶ ಮಹಾದೇವ ಪಾಟೀಲ, ಮಹಾರಾಷ್ಟ್ರದ ಸತಾರ ಕಟಾವ್ ತಾಲೂಕಿನ ವಿಪುಲ್ ಸಂಜಯ್ ದೇಶಮುಖ ಬಂಧಿತರು.
ಇವರು ಭಟ್ಕಳ ಹೂವಿನಬಜಾರನಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದರು. ಇವರಿಂದ ಅಂದಾಜು 60 ಲಕ್ಷ ರೂ. ಮೌಲ್ಯದ 1.5 ಕೆ.ಜಿ. ಚಿನ್ನದ ಬಿಸ್ಕತ್ ಮತ್ತು 8 ಗಟ್ಟಿಗಳು, 61 ಲಕ್ಷ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಹಣದ ಮೂಲ ಮತ್ತು ಚಿನ್ನದ ಮೂಲ ಶೋಧನೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎಸ್ಪಿ ಶಿವ ಪ್ರಕಾಶ ದೇವರಾಜು ಮಾರ್ಗದರ್ಶನದಲ್ಲಿ ಎಎಸ್ಪಿ ನಿಖಿಲ ಬಿ. ನೇತೃತ್ವದಲ್ಲಿ ಸಿಪಿಐ ದಿವಾಕರ ಪಿ.ಎಂ, ಪಿಎಸ್ಐ ಭರತಕುಮಾರ್ ವಿ. ಮತ್ತು ಎಚ್.ಬಿ. ಕುಡಗುಂಟಿ ಹಾಗೂ ಭಟ್ಕಳ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಮಾರುತಿ ಜೆ. ನಾಯ್ಕ, ನಾಗರಾಜ ಮೊಗೇರ, ವಿನಾಯಕ ಪಾಟೀಲ, ಮದಾರಸಾಬ ಚಿಕ್ಕೇರಿ ಇತರರು ಕಾರ್ಯಚರಣೆಯಲ್ಲಿ ಇದ್ದರು.