ಚಿನ್ನದ ಪದಕ ವಿಜೇತೆಗೆ ಸನ್ಮಾನ

26Rajesh2
Published on

ಚಾಮರಾಜನಗರ: ತಾಲೂಕಿನ ದಡದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೀರಭದ್ರಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿಭಾಗದ ಇತಿಹಾಸ ವಿಷಯದಲ್ಲಿ ಚಿನ್ನದ ಪದಕ ಪಡೆದ ಮಧುಶ್ರೀ ಅವರನ್ನು ಗೌರವಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ದಡದಹಳ್ಳಿ ರಮೇಶ್, ಪ್ರತಿಮಾ, ಗೋವಿಂದರಾಜು, ಮೂರ್ತಿ, ಮಧುಸೂದನ್, ಶಿವಣ್ಣ, ರಾಮಸ್ವಾಮಿ, ರೇವಣ್ಣ, ಮುಖ್ಯಶಿಕ್ಷಕ ಮಹದೇವಸ್ವಾಮಿ, ಸುಬ್ರಹ್ಮಣ್ಯ, ರೇಣುಕಾ, ರಾಘವೇಂದ್ರ, ಕುಸುಮಾ, ದೊರೆರಾಜು ಮರಿಸ್ವಾಮಿ, ವಸಂತ, ಮೂರ್ತಿ, ಸುಜಾತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net