

ಚಿಕ್ಕೋಡಿ: ಸಹ&ವಿದ್ಯುತ್ ಟಕದ ಅತ್ಯುತ್ತಮ ಕಾರ್ಯ ನಿರ್ವಹಣೆ ಪರಿಗಣಿಸಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯು ಪುಣೆಯ ಕೋಜನರೇಶನ್ ಅಸೋಸಿಯೇಶನ್ ಆಫ್ ಇಂಡಿಯಾದಿಂದ ವಿವಿಧ ಪ್ರಶಸ್ತಿಗೆ ಭಾಜನವಾಗಿದೆ.
ಸಕ್ಕರೆ ಉದ್ಯಮದಲ್ಲಿನ ಸಹ&ವಿದ್ಯುತ್ ಉಪ ಉತ್ಪಾದನಾ ಟಕಗಳ ಕುರಿತು ವಿಶೇಷ ಅಧ್ಯಯನ, ತಾಂತ್ರಿಕತೆ ಅಭಿವೃದ್ಧಿ ಹಾಗೂ ವಿವಿಧ ವಿಷಯಗಳ ಮಾಹಿತಿ ಶಿಬಿರ ಏರ್ಪಡಿಸಿ ಸಕ್ಕರೆ ಉದ್ಯಮಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಪುಣೆಯ ಕೋ&ಜನರೇಶನ್ ಅಸೋಸಿಯೇಶನ್ ಆ್ ಇಂಡಿಯಾ, ಭಾರತದಲ್ಲಿನ ಎಲ್ಲ ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳ ಪ್ರತಿ ವರ್ಷದ ಕಾರ್ಯ ನಿರ್ವಹಣೆಯ ಮಾನದಂಡಗಳ ಮೌಲ್ಯಮಾಪನ ಮಾಡಿ ಉತ್ತಮ ಕಾರ್ಯನಿರ್ವಹಿಸಿದ ಕಾರ್ಖಾನೆಗಳಿಗೆ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಕಳೆದ ವರ್ಷ ಕಾರ್ಖಾನೆಯ ಸಹ&ವಿದ್ಯುತ್ ಟಕದ ಅತ್ಯುತ್ತಮ ಕಾರ್ಯ ನಿರ್ವಹಣೆ ಪರಿಗಣಿಸಿ ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಸಹ ವಿದ್ಯುತ್ ಟಕಕ್ಕೆ ಪ್ರಶಸ್ತಿ ನೀಡಿದೆ.
ಪುಣೆಯಲ್ಲಿ ಜರುಗಿದ ಸಂಸ್ಥೆಯ ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ, ಕೇಂದ್ರದ ಮಾಜಿ ಕೃಷಿ ಸಚಿವ ಶರದ್ ಪವಾರ ಹಾಗೂ ಭಾರತ ಸರ್ಕಾರದ (ಬಯೋಮಾಸ್) ಎಂಎನ್ಆರ್ಇ ಜಂಟಿ ಕಾರ್ಯದರ್ಶಿ ದಿನೇಶ ಜಗದಾಳೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಖಾನೆಯ ಉಪಪ್ರಧಾನ ವ್ಯವಸ್ಥಾಪಕ ವಿಠ್ಠಲ ಕರಜಗಿ ಅವರಿಗೆ ಅತ್ಯುತ್ತಮ ವ್ಯವಸ್ಥಾಪಕ (ಸಹವಿದ್ಯುತ್) ಹಾಗೂ ಇನ್ಸ್ಟ್ರುಮೆಂಟ್ ಹೆಡ್ ಆಗಿರುವ ಶ್ಯಾಮಗೌಡ ಪಾಟೀಲ ಇವರಿಗೆ "ಅತ್ಯುತ್ತಮ ಇನಸ್ಟ್ರುಮೆಂಟ್ ವ್ಯವಸ್ಥಾಪಕ' ಪ್ರಶಸ್ತಿ ನೀಡಿ ಗೌರವಿಸಿದೆ.
ಕಾರ್ಖಾನೆಯ ಅಧ್ಯ ಮಲ್ಲಿಕಾರ್ಜುನ ಕೋರೆ ಮಾತನಾಡಿ, ಕಾರ್ಖಾನೆ ರೂವಾರಿ ಡಾ. ಪ್ರಭಾಕರ ಕೋರೆ ಅವರ ಮಾರ್ಗದರ್ಶನ ಹಾಗೂ ಕಾರ್ಖಾನೆಯ ಸಂಚಾಲಕ ಅಮಿತ ಕೋರೆ ಇವರ ನೇತೃತ್ವದದ ಆಡಳಿತ ಮಂಡಳಿಯ ಸೂಕ್ತ ರ್ನಿಣಯ, ರೈತರ ಸಹಕಾರ ಮತ್ತು ಅಧಿಕಾರಿ ಹಾಗೂ ಕಾರ್ಮಿಕರ ಸತತ ಪ್ರಯತ್ನದ ಲವಾಗಿ 2022&23ರ ಹಂಗಾಮಿನಲ್ಲಿ ಕಾರ್ಖಾನೆಯ ಇತಿಹಾಸದಲ್ಲಿ ಉತ್ತಮ ಇಳುವರಿಯೊಂದಿಗೆ ಅತ್ಯಂತ ಗರಿಷ್ಠ 12,01,963.800 ಮೆ.ಟನ್ ಕಬ್ಬು ನುರಿಸಿ ಮೈಲುಗಲ್ಲು ಸ್ಥಾಪಿಸಿದೆ. ಅಲ್ಲದೆ ಕಾರ್ಖಾನೆಯ ಉಪ ಉತ್ಪನ್ನ ಟಕಗಳಾದ ಸಹವಿದ್ಯುತ್ ಮತ್ತು ಡಿಸ್ಟಿಲರಿ ಟಕಗಳು ಸಹ ಕಳೆದ ಹಂಗಾಮಿನಲ್ಲಿ ಉತ್ತಮ ರೀತಿಯಲ್ಲಿ ಪೂರ್ಣ ಮತೆಯೊಂದಿಗೆ ಕಾರ್ಯನಿರ್ವಹಿಸಿವೆ. ಈ ಪ್ರಶಸ್ತಿಗಳಿಂದ ಎಲ್ಲ ಕಾರ್ಮಿಕರು ಹಾಗೂ ರೈತರು ಅತೀವ ಸಂತಸಗೊಂಡಿದ್ದಾರೆ ಎಂದರು.
ಕಾರ್ಖಾನೆ ನಿರ್ದೇಶಕ ಅಮಿತ ಕೋರೆ ಮಾತನಾಡಿ, ಕಳೆದ ಹಂಗಾಮಿನಲ್ಲಿ ಕಾರ್ಖಾನೆಯ ಇತಿಹಾಸದಲ್ಲಿ ಅತಿ ಹೆಚ್ಚು ಕಬ್ಬು ನುರಿಸಿ ಇತಿಹಾಸ ಸೃಷ್ಟಿಸಿದೆ. ಇದರ ಜತೆಗೆ ಕಾರ್ಖಾನೆಯ ಉಪ ಉತ್ಪನ್ನ ಟಕಗಳಾದ ಸಹವಿದ್ಯುತ್ ಮತ್ತು ಡಿಸ್ಟಿಲರಿ ಟಕಗಳು ಸಹ ಪೂರ್ಣ ಮತೆಯೊಂದಿಗೆ ಕಾರ್ಯ ನಿರ್ವಹಿಸಿದ್ದಕ್ಕೆ ಕಾರ್ಖಾನೆ ಈ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾರ್ಖಾನೆಯು ತನ್ನ ಕಾರ್ಯಮತೆಗೆ ತಕ್ಕಂತೆ ಬೇಕಾಗುವ ಪರ್ಯಾಪ್ತ ಪ್ರಮಾಣದ ಕಬ್ಬು ಲಭ್ಯವಾಗಿಸಿಕೊಳ್ಳುವ ದೃಷ್ಟಿಯಿಂದ ಕಾರ್ಯೇತ್ರದಲ್ಲಿ ವಿವಿಧ ಕೃಷಿ ಅಭಿವೃದ್ಧಿ ಯೋಜನೆ ಹಮ್ಮಿಕೊಂಡಿದೆ. ಈ ಮೂಲಕ ಹೆಚ್ಚಿನ ಇಳುವರಿ ಕಬ್ಬು ಪಡೆದು ಕಾರ್ಖಾನೆಯ ಸಕ್ಕರೆ ಉತ್ಪಾದನಾ ಟಕ ಹಾಗೂ ಸಹವಿದ್ಯುತ್ ಮತ್ತು ಡಿಸ್ಟಿಲರಿ ಉಪ ಉತ್ಪನ್ನ ಟಕಗಳು ಸಹ ಕಳೆದ ಹಂಗಾಮಿನಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿರುತ್ತವೆ. ಇವೆಲ್ಲ ಕಾರಣಗಳಿಂದ ಕಾರ್ಖಾನೆಗೆ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ. ಈ ಪ್ರಶಸ್ತಿಯ ಶ್ರೇಯಸ್ಸು ಕಾರ್ಖಾನೆಯ ಸದಸ್ಯ&ಬಾಂಧವರಿಗೂ, ಕಬ್ಬು ಪೂರೈಸಿದ ಸಮಸ್ತ ರೈತ ಹಾಗೂ ಕಾರ್ಮಿಕ ವರ್ಗದವರಿಗೂ ಸಲ್ಲುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಪುಣೆಯಲ್ಲಿ ರಾಜ್ಯಸಭಾ ಸದಸ್ಯ ಶರದ ಪವಾರ ಹಾಗೂ ಎಂಎನ್ಆರ್ಇ ಜಂಟಿ ಕಾರ್ಯದರ್ಶಿ ದಿನೇಶ ಜಗದಾಳೆ ಅವರಿಂದ ಪ್ರಶಸ್ತಿ ಸ್ವೀಕರಿಸುತ್ತಿರುವ ತಾತ್ಯಾಸಾಹೇಬ ಕಾಟೆ. ಕಾರ್ಖಾನೆ ಉಪಾಧ್ಯ ಮಲ್ಲಪ್ಪ ಮೈಶಾಳೆ, ಅಣ್ಣಾಸಾಬ ಇಂಗಳೆ, ವ್ಯವಸ್ಥಾಪಕ ನಿರ್ದೇಶಕ ಆರ್.ಟಿ.ದೇಸಾಯಿ ಇತರರು ಇದ್ದಾರೆ.