ಚಿದಂಬರ ಸ್ವಾಮಿಗಳ ಜಯಂತ್ಯುತ್ಸವ ಸಂಪನ್ನ

govinda joshi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಗರದ ಶ್ರೀ ಶಿವ ಚಿದಂಬರ ಚೈತನ್ಯ ಸೇವಾ ಸಮಿತಿಯ ರಜತ ಮಹೋತ್ಸವ ಹಾಗೂ ಶ್ರೀ ಚಿದಂಬರ ಸ್ವಾಮಿಗಳ ಜಯಂತ್ಯುತ್ಸವ ಕಾರ್ಯಕ್ರಮ ಗೋಕುಲ ರಸ್ತೆಯ ಶರ್ಮಾ ಭವನದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.

ಶ್ರೀ ಚಿದಂಬರ ಸ್ವಾಮಿಗಳ ಭಾವಚಿತ್ರದ ಭವ್ಯ ಶೋಭಾಯಾತ್ರೆಗೆ ಶ್ರೀ ಕ್ಷೇತ್ರ ಕೆಂಗೇರಿ-ಮುರಗೋಡದ ಪೀಠಾಧಿಕಾರಿ ದಿವಾಕರ ಶಂಕರ ದೀಕ್ಷಿತ ಗುರೂಜಿ ಚಾಲನೆ ನೀಡಿದರು. ಗಣಹೋಮ, ರುದ್ರಸ್ವಾಹಾಕಾರ, ದುರ್ಗಾ ಹೋಮ, ಭಕ್ತರಿಂದ ಸಾಮೂಹಿಕ ಶ್ರೀ ಸತ್ ಚಿದಂಬರ ಪೂಜೆಗಳು, ಶ್ರೀ ಶಿವ ಚಿದಂಬರ ಕೋಟಿ ನಾಮ ಜಪ, ಇತ್ಯಾದಿ ಧಾರ್ವಿುಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಹಿರಿಯ ಸಾಧಕ ಗುರು ಚಿದಂಬರ ದೀಕ್ಷಿತ, ನೀಲಕಂಠ ದೀಕ್ಷಿತ, ಸಂತ ಸುರೇಶ ಪಾಟೀಲ, ಗಂಗಾಧರ ದೀಕ್ಷಿತ ಬಡ್ಲಿ, ಶ್ರೀ ಗುರುದತ್ತ ಸ್ವಾಮಿ, ವಿಶ್ವನಾಥ ಚಕ್ರವರ್ತಿ, ವೇ.ಮೂ. ಶಂಕರ ಭಟ್ ಜೋಶಿ, ಶ್ರೀ ಚಿದಂಬರ ಸ್ವಾಮಿಗಳ ದೈವಿ ವ್ಯಕ್ತಿತ್ವ, ಸನಾತನ ಧರ್ಮ ರಕ್ಷಣೆಯಲ್ಲಿ ಅವರ ಯೋಗದಾನ ಹಾಗೂ ಮಾನವ ಕಲ್ಯಾಣದ ವಿವರಗಳನ್ನು ಉಪನ್ಯಾಸ ಕೀರ್ತನೆಗಳ ಮೂಲಕ ತಿಳಿಸಿಕೊಟ್ಟರು.</p><p>ವಿದ್ವಾನ ಮೈಸೂರ ರಾಮಚಂದ್ರ ಆಚಾರ್ಯ ಸಂಗೀತ ಸೇವೆ ನಡೆಸಿಕೊಟ್ಟರು.

ಬ್ರಾಹ್ಮಣ ಸಮಾಜದ ಮುಖಂಡ ಗೋವಿಂದ ಜೋಶಿ ಮಾತನಾಡಿ, ಶ್ರೀ ಚಿದಂಬರ ಸ್ವಾಮಿಗಳು ರಾಜ-ಮಹಾರಾಜರಿಗೆ ಸನಾತನ ಧರ್ಮ ರಕ್ಷಣೆಯಲ್ಲಿ ಮಾರ್ಗದರ್ಶಕರಾಗಿದ್ದರು. ಪೂಜ್ಯರ ಜೀವನ ಕ್ರಮಗಳು, ಉಪದೇಶಾಮೃತಗಳು ಒಂದು ಸಮಾಜಕ್ಕೆ ಸಿಮೀತಗೊಳ್ಳದೆ ಸಾರ್ವತ್ರಿಕಗೊಳ್ಳುವಂತಾಗಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net