

ಚಿತ್ರದುರ್ಗ: ಪುರುಷರ ಆಕರ್ಷಕ ಬಟ್ಟೆಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ದಿ. ರೇಮೆಂಡ್ ಕಂಪನಿಯ ಹೊಸ ಮಾರಾಟ ಮಳಿಗೆ ಚಿತ್ರದುರ್ಗದಲ್ಲಿ ಸೆ.15ರಂದು ಶುಭಾರಂಭವಾಗಲಿದೆ.
ನಗರದ ಪಿ.ಬಿ.ರೋಡ್ ಜಗಳೂರು ಮಹಾಲಿಂಗಪ್ಪ ಕಂಪರ್ಟ್ಸ್ ಎದುರಿನ ಕಪೂರ್‌ಟವರ್‌ನಲ್ಲಿ ಬೆಳಗ್ಗೆ 10ಕ್ಕೆ ಮುಂಬಯಿ ಟೆಕ್ಸ್‌ಟೈಲ್ ರೇಮಂಡ್‌ಲೈಫ್ ಸ್ಟೈಲ್‌ನ ಹೆಡ್‌ಸೇಲ್ಸ್ ಆಡ್ಮಿನ್ ಮೆಲ್ವಿನ್ ಜೆ.ನ್ಯೂಟನ್ ಅವರು ದಿ.ರೇಮೆಂಡ್ ಶಾಪ್‌ನ್ನು ಉದ್ಘಾಟಿಸುವರು. ಶಾಪ್‌ನ ಮಾಲೀಕರಾದ ಕೆ.ಎಸ್.ಪದ್ಮನಾಭ ಶೆಟ್ಟಿ, ಕೆ.ಎನ್.ರಾಮು ಹಾಗೂ ಗಣ್ಯರು ಉಪಸ್ಥಿತರಿರುವರು.
ರೇಮಂಡ್ ಫೈನ್, ರೇಮಂಡ್ ರೆಡಿ-ಟು-ವೇರ್, ಪಾರ್ಕ್ ಅವೆನ್ಯೂ, ಪಾರ್ಕ್ಸ್, ಕಲರ್ಸ್ ಫ್ಲೆಕ್ಸ್ ಮತ್ತು ವೈವಿಧ್ಯಮಯ ಕ್ಯಾಶುಯಲ್, ಫಾರ್ಮಲ್ ಆಕರ್ಷಕ ರೆಡಿಮೇಡ್ ಸೂಟ್, ಶರ್ಟ್ಸ್, ಪ್ಯಾಂಟ್ ಹಾಗೂ ಟಿ-ಶರ್ಟ್ ಇತ್ಯಾದಿ ಪುರುಷರ ಫ್ಯಾಷನ್‌ಗೆ ಪೂರಕವಾಗಿರುವ ವ್ಯಾಪಕ ಶ್ರೇಣಿಯಲ್ಲಿ ಇಲ್ಲಿ ಲಭ್ಯವಿದೆ ಹಾಗೂ ಗುಣಮಟ್ಟದ ಟೈಲರಿಂಗ್ ವ್ಯವಸ್ಥೆ ಕೂಡ ಇದೆ.
ನಗರದಲ್ಲಿ ಶುಭಾರಂಭವಾಗುತ್ತಿರುವ ಪದ್ಮನಾಭ್ ಶೆಟ್ಟಿ ಸಹೋದರರ ಈ ಶಾಪ್, ಚಿತ್ರದುರ್ಗದಲ್ಲಿ 2ನೇಯದ್ದಾಗಿದೆ. ಮೊದಲನೇ ದಿ.ರೇಮೆಂಡ್ ಶಾಪ್ ನಗರದ ಬಿ.ಡಿ.ರಸ್ತೆಯಲ್ಲಿದೆ.