ಚಿತ್ರದುರ್ಗದಲ್ಲಿ ಮೇಲೇಳದ ಸಾಹಸ ಕ್ರೀಡಾ ಕೇಂದ್ರ

CTD WALCLIMBING DRAWING--
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ನಗರದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಉದ್ದೇಶಿತ ಸಾಹಸ ಕ್ರೀಡಾ ಕೇಂದ್ರ (ವಾಲ್‌ಕ್ಲೈಂಬಿಂಗ್) ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ.

ಒಂದು ಕೋಟಿ ರೂ. ವೆಚ್ಚದ ಸಾಹಸ ಕ್ರೀಡಾ ಕೇಂದ್ರದ ನಿರ್ಮಾಣಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 2024ರ ನವೆಂಬರ್ 11ರಂದು ಮಂಜೂರಾತಿ ನೀಡಿತ್ತು. ಹಾಗೂ 50 ಲಕ್ಷ ರೂ.ಅನುದಾನ ಬಿಡುಗಡೆ ಮಾಡಿ ನಿರ್ಮಾಣ ಕಾಮಗಾರಿ ಹೊಣೆಯನ್ನು ಚಿತ್ರದುರ್ಗದ ಕೆಆರ್‌ಐಡಿಎಲ್‌ಗೆ ವಹಿಸಿತ್ತು. ಆದರೆ, ಕಾಮಗಾರಿಗೆ ಇನ್ನೂ ಚಾಲನೆ ಸಿಕ್ಕಿಲ್ಲ.

ಕ್ರೀಡಾಂಗಣದಲ್ಲಿ ಈ ಕೇಂದ್ರ ಸ್ಥಾಪನೆ ಸಂಬಂಧ ಸ್ಥಳೀಯ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸ್ಥಳ ಪರಿಶೀಲಿಸಿದ್ದರು. ಮಳೆಯಿಂದ ಸುರಕ್ಷಿತಗೊಳಿಸಲು ಹಾಗೂ ಎಲ್ಲ ಕಾಲಗಳಲ್ಲೂ ತರಬೇತಿಗೆ ಅನುಕೂಲವಾಗುವಂಥ ರೀತಿಯಲ್ಲಿ ಕೇಂದ್ರವನ್ನು ನಿರ್ಮಿಸಬೇಕು. ವಾಲ್‌ಕ್ಲೈಂಬಿಂಗ್‌ವೊಂದನ್ನೇ ನಿರ್ಮಿಸಿದರೆ ಸಾಲದು, ಪೂರಕವಾಗಿ ಕ್ಟೃಟ್ಛ್ಝಛ್ಡಿ ಛಿಛಿಠಿ,ಇಜ್ಞ್ಝಿಜ್ಞಿ ಊಛ್ಞ್ಚಿಜ್ಞಿಜ ಹಾಗೂ ಗೇಟ್ ಅಳವಡಿಸಬೇಕೆಂದು ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಇಲಾಖೆ ಚಿತ್ರದುರ್ಗ ಸಹಾಯಕ ನಿರ್ದೇಶಕರು, ರಿವೈಸ್ಡ್ ಎಸ್ಟಿಮೇಟ್‌ನೊಂದಿಗೆ ಹೆಚ್ಚುವರಿ ವೆಚ್ಚಕ್ಕೆ ಅನುಮೋದನೆ ಕೋರಿ ಕಳೆದ ಮಾರ್ಚ್‌ನಲ್ಲಿ ಇಲಾಖೆ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೆ, ಇಲಾಖೆ ಹೆಚ್ಚುವರಿ ಮೊತ್ತ ಭರಿಸಲು ನಿರಾಕರಿಸಿದೆ. ಆ ವೆಚ್ಚವನ್ನು ಸ್ಥಳೀಯವಾಗಿ ಕ್ರೋಢೀಕರಿಸಿಕೊಳ್ಳುವಂತೆ ಮೇಲಧಿಕಾರಿಗಳು ಸೂಚಿಸಿದ್ದಾರೆ ಎಂದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ನಿರ್ಮಾಣದ ಕನಸು ನನಸಾಗುವುದೇ ಎಂಬ ಅನುಮಾನದ ಪ್ರಶ್ನೆ ಈಗ ಎದುರಾಗಿದೆ.

ಉಪಕರಣಗಳನ್ನು ಇಡುವ ಕೊಠಡಿಯೊಂದಿಗೆ 100 ಲಕ್ಷ ರೂ. ವೆಚ್ಚದ ವಾಲ್‌ಕ್ಲೈಂಬಿಂಗ್ ನಿರ್ಮಾಣಕ್ಕೆ ಮೊದಲು ಡಿಸೈನ್ ಮಾಡಲಾಗಿತ್ತು. 60/70 ಅಡಿ ಅಗಲ, 70 ಅಡಿ ಎತ್ತರದೊಂದಿಗೆ ನಿರ್ಮಾಣವಾಗಲಿರುವ ಉದ್ದೇಶಿತ ಈ ಕೇಂದ್ರದಲ್ಲಿ 44 ಅಡಿ ಸಾಹಸಿ ಗೋಡೆ ಇರುತ್ತದೆ. ಇಲ್ಲಿ ಬೇಸಿಕ್, ಫಾಸ್ಟ್ ಮತ್ತು ಲೀಡ್ ಕ್ಲೈಂಬಿಂಗ್‌ಗೆ ಅವಕಾಶವಿರುತ್ತದೆ.

ಇದರೊಂದಿಗೆ ಈಗ ವೀಕ್ಷಕರ ಗ್ಯಾಲರಿ ಸಹಿತ ಸುರಕ್ಷಿತ, ಎಲ್ಲ ಕಾಲದಲ್ಲೂ ತರಬೇತಿಗೆ ಪೂರಕವಾಗಿ ಕೇಂದ್ರವನ್ನು ನಿರ್ಮಿಸಬೇಕಿದೆ ಎಂದು ಕೆಆರ್‌ಐಡಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಶಾಸಕರ ನಿರ್ದೇಶನದಂತೆ ರಿವೈಸ್ಡ್ ಡಿಸೈನ್ ಹಾಗೂ ಎಸ್ಟಿಮೇಟ್ ಅನ್ನು ಮೇಲಧಿಕಾರಿಗಳಿಗೆ ಕಳಿಸಲಾಗಿದೆ ಎಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಿಗಿ ತಿಳಿಸಿದ್ದಾರೆ.

.......ಕೋಟ್.......

ಶಾಸಕರು ಸೂಚಿಸಿರುವಂತೆ ರಿವೈಸ್ಡ್ ಎಸ್ಟಿಮೇಟ್‌ಗೆ ಅನುಮತಿ ದೊರಕಿದ ಕೂಡಲೇ ಪ್ರಸ್ತುತ ಮಂಜೂರಾಗಿರುವ ಅನುದಾನ ಬಳಸಿಕೊಂಡು ಸಾಹಸ ಕ್ರೀಡಾ ಕೇಂದ್ರದ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು. ಹೆಚ್ಚುವರಿ ಅಂದಾಜು 30 ಲಕ್ಷ ರೂ.ಗಳನ್ನು ತಮ್ಮ ಅನುದಾನದಲ್ಲಿ ಮಂಜೂರು ಮಾಡುವುದಾಗಿ ಶಾಸಕರು ಹೇಳಿದ್ದಾರೆ.

ಕರಿಶೆಟ್ಟಿ ವಿಶ್ವನಾಥ, ಇಇ, ಕೆಆರ್‌ಐಡಿಎಲ್, ಚಿತ್ರದುರ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net