ಚಿತ್ರದುರ್ಗದಲ್ಲಿ ಬೈಕ್ ರ‌್ಯಾಲಿ

PHOTO-2A--00006
Published on

ಚಿತ್ರದುರ್ಗ: ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ವೀರಶೈವ ಸಮಾಜದಿಂದ ಗುರುವಾರ ನಗರದಲ್ಲಿ ಬೈ ಕ್ ರ‌್ಯಾಲಿ ನಡೆಯಿತು.
ನೀಲಕಂಠೇಶ್ವರಸ್ವಾಮಿ ದೇವಸ್ಥಾನ ಬಳಿ ಆರಂಭವಾಗಿ ಆನೆಬಾಗಿಲು, ದೊಡ್ಡಪೇಟೆ, ರಂಗಯ್ಯನ ಬಾಗಿಲು, ಮದಕರಿ ನಾಯಕ ವೃತ್ತ, ಗಾಯತ್ರಿ ಸರ್ಕಲ್, ಜೆಸಿಆರ್, ಆರ್‌ಟಿಒ ಕಚೇರಿ ರಸ್ತೆ, ಕೆಳಗೋಟೆ, ವೀರವನಿತೆ ಒನಕೆ ಓಬವ್ವ ವೃತ್ತ ಹಾಗೂ ಕನಕವೃತ್ತದ ಮೂಲಕ ನೀಲಕಂಠೇಶ್ವರಸ್ವಾಮಿ ದೇವಾಲಯದ ಬಳಿ ರ‌್ಯಾಲಿ ಮುಕ್ತಾಯಗೊಂಡಿತು.
ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಸಹ ಕಾರ್ಯದರ್ಶಿ ಜಿತೇಂದ್ರ ಹುಲಿಕುಂಟೆ, ಖಜಾಂಚಿ ಕೆ.ಎಂ.ತಿಪ್ಪೇಸ್ವಾಮಿ, ನಗರಸಭೆ ಸದಸ್ಯರಾದ ಕೆ.ಬಿ.ಸುರೇಶ್, ಜಯಣ್ಣ, ವೀರಶೈವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಎಚ್.ಎಂ.ಮಂಜುನಾಥ್, ರುದ್ರೇಶ್, ಸಿದ್ದವ್ವನಹಳ್ಳಿ ಪರಮೇಶ್, ಪಿಳ್ಳೆಕೆರನಹಳ್ಳಿ ಬಸವರಾಜ್, ವೀರೇಂದ್ರಕುಮಾರ್, ಯಶವಂತ್, ಸಿದ್ದೇಶ್, ಬಿಟಿಆರ್ ಮಲ್ಲಿಕಾರ್ಜುನ್, ಪ್ರಕಾಶ್ ಗುತ್ತಿನಾಡು, ಜಯಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net