ಚಿತ್ರದುರ್ಗದಲ್ಲಿ ದಿ ರೇಮಂಡ್‌ಶಾಪ್ ಆರಂಭ

CTD RAYMOND SHOP
Published on

ಚಿತ್ರದುರ್ಗ: ಪುರುಷರ ಆಕರ್ಷಕ ಬಟ್ಟೆಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ದಿ ರೇಮಂಡ್ ಕಂಪನಿ ನಗರದ ಪಿ.ಬಿ.ರಸ್ತೆಯಲ್ಲಿ ಹೊಸ ಮಾರಾಟ ಮಳಿಗೆ ಭಾನುವಾರ ಶುಭಾರಂಭಗೊಂಡಿತು.
ಜಗಳೂರು ಮಹಾಲಿಂಗಪ್ಪ ಕಂಪರ್ಟ್ಸ್ ಎದುರಿನ, ಕಪೂರ್ ಟವರ್‌ನಲ್ಲಿ ಸ್ಥಾಪಿಸಿರುವ ಈ ಶಾಪ್ ಉದ್ಘಾಟನಾ ಸಮಾರಂಭದಲ್ಲಿ ಮುಂಬಯಿ ಟೆಕ್ಸ್‌ಟೈಲ್ ರೇಮಂಡ್ ಲೈಫ್‌ಸ್ಟೈಲ್ ಕಂಪನಿಯ ವಿವಿಧ ವಲಯಗಳ ಮಾರಾಟ ಮುಖ್ಯಸ್ಥರಾದ ಶ್ರೀಪ್ರಕಾಶ್, ನಿತಿನ್, ಚಂದ್ರಶೇಖರ್ ಭಾಗವಹಿಸಿದ್ದರು.
ಲಕ್ಷ್ಮೀಪೂಜೆಯೊಂದಿಗೆ ಶಾಪ್ ಶುಭಾರಂಭಗೊಂಡಿತು. ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯಾ ಬಸವರಾಜನ್, ಎಸ್‌ಆರ್‌ಎಸ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ರಾಜು ತಲ್ಲೂರು, ಮರ್ಚೆಂಟ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀಕಾಂತ ರೆಡ್ಡಿ, ರಾಜ್ಯ ಜೆಡಿಎಸ್ ಪ್ರಧಾನ ಕಾರ‌್ಯದರ್ಶಿ ಬಿ.ಕಾಂತರಾಜ್, ನಗರಸಭೆ ಅಧಿಕಾರಿ ಜಯಣ್ಣ, ಕೆ.ರವಿಶಂಕರರೆಡ್ಡಿ ಮತ್ತಿತರ ಹಲವು ಗಣ್ಯರು ಆಗಮಿಸಿ ಶಾಪ್ ಮಾಲೀಕರಾದ ಕೆ.ಎಸ್.ಪದ್ಮನಾಭ ಶೆಟ್ಟಿ ಹಾಗೂ ಕೆ.ಎನ್.ರಾಮು ಅವರಿಗೆ ಶುಭಕೋರಿದರು.
ಪಾರ್ಕ್ ಅವೆನ್ಯೂ, ಪಾರ್ಕ್ಸ್, ಕಲರ್ಸ್‌ ಫ್ಲೆಕ್ಸ್, ರೇಮಂಡ್ ಫೈನ್, ರೇಮಂಡ್ ರೆಡಿ-ಟು-ವೇರ್ ಮತ್ತು ವೈವಿಧ್ಯಮಯ ಕ್ಯಾಶುಯಲ್, ಫಾರ್ಮಲ್ ಆಕರ್ಷಕ ರೆಡಿಮೇಡ್ ಸೂಟ್, ಶರ್ಟ್ಸ್, ಪ್ಯಾಂಟ್ ಹಾಗೂ ಟಿ-ಶರ್ಟ್ ಇತ್ಯಾದಿ ಪುರುಷರ ಫ್ಯಾಷನ್‌ಗೆ ಪೂರಕವಾಗಿರುವ, ವ್ಯಾಪಕ ಶ್ರೇಣಿಯಲ್ಲಿ ಬಟ್ಟೆಗಳಿರುವ ಈ ಸುಸಜ್ಜಿತ ಶಾಪ್‌ನಲ್ಲಿ ಗುಣಮಟ್ಟದ ಟೈಲರಿಂಗ್ ವ್ಯವಸ್ಥೆ ಕೂಡ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net