

ಚಿತ್ರದುರ್ಗ: ಚಿತ್ರದುರ್ಗದಲ್ಲಿ ಆರು ಜನ ಬಾಂಗ್ಲಾ ದೇಶದ ಅಕ್ರಮ ನುಸುಳುಕೋರರು ಪತ್ತೆಯಾಗಿದ್ದು ಈ ಪ್ರಕರಣ ಕೋಟೆ ನಾಡನ್ನು ಬೆಚ್ಚಿ ಬೀಳಿಸಿದೆ.
ಬಾಂಗ್ಲಾ ಮೂಲದವರೆಂಬ ಶಂಕೆ ಮೇಲೆ ನಗರದ ಪ್ರತ್ಯೇಕ ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ 15 ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ 6 ನುಸುಳುಕೋರರು ಇರುವುದು ಬೆಳಕಿಗೆ ಬಂದಿದೆ.
ಶೇಖ್ ಶೈಪುರ್ ರೆಹಮಾನ್, ಮೊಹಮದ್ ಸುಮನ್ ಹುಸೇನ್ ಅಲಿ, ಮಜರ್ ಉಲ್, ಅಜೀಜ್ ಉಲ್ ಷೇಕ್, ಮಹಮದ್ ಶಕೀಬ್ ಸಿಕ್ದರ್, ಸನಾವರ್ ಹುಸೇನ್ ಇದೀಗ ಪೊಲೀಸ್ ವಶದಲ್ಲಿದ್ದಾರೆ.
ಆರೂ ಜನರ ದಾಖಲಾತಿ ಮತ್ತಿತರ ವಿವರಗಳ ಸಂಗ್ರಹ ಮಂದಿಟ್ಟುಕೊಂಡು ಕೋಟೆ ಠಾಣೆ ವ್ಯಾಪ್ತಿಯಲ್ಲಿ ಇಬ್ಬರನ್ನು ಹಾಗೂ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಾಲ್ವರನ್ನು ತೀವ್ರ ತನಿಖೆಗೆ ಒಳಪಡಿಸಲಾಗಿದೆ.
ಇವರ ಬಳಿ ಪಶ್ಚಿಮ ಬಂಗಾಳದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಸೋಮವಾರ ಕೋಟೆ ಠಾಣೆಗೆ ಭೇಟಿ ನೀಡಿದ್ದರು.
ರಾಜ್ಯದಲ್ಲಿ ಈಚೆಗೆ ಬಾಂಗ್ಲಾ ನುಸುಳುಕೋರರ ವಿರುದ್ಧದ ಕಾರ್ಯಾಚರಣೆ ನಡೆಯುತ್ತಿದೆ. ಶಿವಮೊಗ್ಗದಲ್ಲೂ ಏಳು ಜನರನ್ನು ಬಂಧಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಶೋಧ ನಡೆಸಿದ್ದ ಪೊಲೀಸರಿಗೆ ಆರು ಮಂದಿ ನುಸುಳುಕೋರರು ಸಿಕ್ಕಿಬಿದ್ದಿದ್ದಾರೆ