

ಚಿತ್ರದುರ್ಗ: ವಿಶ್ವ ಹಿಂದು ಪರಿಷತ್-ಬಜರಂಗದಳ ನೇತೃತ್ವದಲ್ಲಿ ಆ.31ರಿಂದ ಸೆ.17ರವರೆಗೆ ಆಚರಿಸುವ ಹಿಂದು ಮಹಾ ಗಣಪತಿ ಮಹೋತ್ಸವ ದ ಈ ಬಾರಿ ಪ್ರತಿಷ್ಠಾಪನ ಮೂರ್ತಿಯೂ ಶ್ರೀ ರಾಮನನ್ನು ಹೋಲಲಿದೆ. ಮಹಾರಾಷ್ಟ್ರ ಕಲಾವಿದರು ಸಿದ್ಧಪಡಿಸಿರುವ 15 ಅಡಿ ಎತ್ತರದ ಈ ಮೂರ್ತಿ ಸೋಮವಾರ ಪುರ ಪ್ರವೇಶಿಸಿತು.
ಶ್ರೀ ರಾಮನ ಹೋಲುವ ನಾಲ್ಕು ಹಸ್ತಗಳ ಈ ಗಣೇಶನ ಮೂರ್ತಿಯ ಹಸ್ತಗಳಲ್ಲಿ ಭರ್ಜಿ,ಬಿಲ್ಲು,ಬಾಣ ಮತ್ತು ಕತ್ತಿ ಇರಲಿದೆ ಎಂದು ಉತ್ಸವ ಸಮಿತಿ ಮೂಲಗಳು ತಿಳಿಸಿವೆ. ಬೆಳಗ್ಗೆ ನಗರದ ಹೊರ ವಲಯದಲ್ಲಿರುವ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಗುರುಪೀಠಕ್ಕೆ ಮೂರ್ತಿಯನ್ನು ತಂದು ಪೂಜಿಸಿದ ಬಳಿಕ ಬಿಡಿ ರಸ್ತೆಯ ಪಂಚಾಚಾರ್ಯ ಕಲ್ಯಾಣ ಮಂಟಪ ಬಳಿಯ ಜೈನಧಾಮದ ಪೆಂಡಾಲ್‌ಗೆ ತೆರೆದ ವಾಹನದಲ್ಲಿ ತರಲಾಯಿತು. ಮೂರ್ತಿಪುರ ಪ್ರವೇಶ ಮುನ್ನ ನಡೆದ ಪೂಜೆ ಸಂದರ್ಭದಲ್ಲಿ ಶಾಸಕ ಜಿ.ಎಚ್.ತಿಪಾರೆಡ್ಡಿ,ಉತ್ಸವ ಸಮಿತಿ ಅಧ್ಯಕ್ಷ ವಿಪುಲ್‌ಜೈನ್,ಟೈಗರ್ ತಿಪ್ಪೇಸ್ವಾಮಿ,ಬದ್ರಿನಾಥ್,ಪ್ರಭಂಜನ್,ಡೈರಿ ಶ್ರೀನಿವಾಸ್,ಪಿ.ರುದ್ರೇಶ್,ಅಶೋಕ್,ಓಂಕಾರ್, ವಿಠ್ಠಲ್,ರಂಗಸ್ವಾಮಿ,ರೋಹಿತ್,ಕೇಶವ್,ರಂಗಸ್ವಾಮಿ,ವಿಕ್ರಾಂತ್,ಶ್ರೇಣಿಕ್,ಶಶಿಧರ್ ಮತ್ತಿತರರು ಇದ್ದರು.
ವೀರ ಸಾರ್ವಕರ್ ಪೆಂಡಾಲ್
ಜೈನ ಧಾಮದ ಮುಖ್ಯಪೆಂಡಾಲ್‌ಗೆ ವೀರ ಸಾರ್ವಕರ್ ಅವರ ಹಾಗೂ ಇದಕ್ಕೆ ಹೊಂದಿಕೊಂಡಂತೆ ನಿರ್ಮಿಸಿರುವ ಸಾಂಸ್ಕೃತಿಕ ಕಾರ‌್ಯ ಕ್ರಮಗಳ ಪೆಂಡಾಲ್‌ಗೆ ಅಶೋಕ್ ವಿಎಚ್‌ಪಿ ಹಿರಿಯ ಮುತ್ಸದ್ಧಿ ಸಿಂಘಾಲ್ ಅವರನ್ನು ಹೆಸರನ್ನು ಇಡಲಾಗಿದೆ. ಸೆ.17ರಂದು ನಡೆಯ ಲಿರುವ ಮೂರ್ತಿಯ ಭವ್ಯ ಶೋಭಾ ಯಾತ್ರೆ ನಡೆಯಲಿದೆ.
ಸಿಂಹದ ಮೇಲೆ ವಿರಾಜಮಾನ ಆನೆಬಾಗಿಲು ಗಣಪ
ನಗರದ ಆನೆಬಾಗಿಲು ಬಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿ 65ನೇ ವ ರ್ಷದ ಪ್ರಸನ್ನ ಗಣಪತಿ ಮಹೋತ್ಸವ ಆಚರಿಸಲಾಗುತ್ತಿದೆ. ಆ.31 ಮೂರ್ತಿಯನ್ನು ಪ್ರತಿಷ್ಠಾಪಿಸಿ ಸೆ.10ರವರೆಗೆ ನಿತ್ಯವೂ ಪೂಜಾಧಿ ಧಾ ರ್ಮಿಕ,ಸಾಂಸ್ಕೃತಿಕ ಕಾರ‌್ಯಕ್ರಮಗಳು ನಡೆಯಲಿವೆ. ಶಿವಮೊಗ್ಗದ ಶಿಲ್ಪಿ ವಿ.ರಾಮಕೃಷ್ಣ ಹಾಗೂ ವಿ.ಪಾಂಡುರಂಗ ಅವರು ನಿರ್ಮಿಸಿರುವ ಸಿಂಹದ ಮೇಲೆ ವಿರಾಜಮಾನವಾದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ.