ಚಿತ್ರದುರ್ಗ ಪ್ರವೇಶಿಸಿದ ಒಳ ಮೀಸಲು ಯಾತ್ರೆ

Manava sarapali
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
Published on

ಚಿತ್ರದುರ್ಗ: ಒಳ ಮೀಸಲು ತ್ವರಿತ ಜಾರಿಗೆ ಆಗ್ರಹಿಸಿ ಮಾ. 5ರಿಂದ ಹರಿಹರದಿಂದ ಆರಂಭವಾಗಿರುವ ಕ್ರಾಂತಿಕಾರಿ ಪಾದಯಾತ್ರೆ ಸೋಮವಾರ ಚಿತ್ರದುರ್ಗ ಪ್ರವೇಶಿಸಿತು. ದಲಿತಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಯಾತ್ರೆಗೆ ಭವ್ಯ ಸ್ವಾಗತ ನೀಡಿದರು.

ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಒಳ ಮೀಸಲು ಹೋರಾಟ ಸಮಿತಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಒಳ ಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿದರು. ಕೆಲವರು ರಕ್ತದಾನಕ್ಕೂ ಮುಂದಾದರು.

ಈ ಮೊದಲು ತಾಂತ್ರಿಕ ಕಾರಣ ಮುಂದಿಟ್ಟು ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಜಾರಿ ಎನ್ನುತ್ತಿದ್ದ ಸರ್ಕಾರ, ಇದೀಗ ನ್ಯಾಯಾಲಯದ ಆದೇಶ ಪ್ರಕಟದ ಬಳಿಕವೂ ನೆಪ ಹೇಳುತ್ತ ಸರ್ಕಾರ ಕಾಲಹರಣ ಮಾಡುತ್ತಿದೆ. ಇದರಿಂದ ಅರ್ಹ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.

ಮಾ. 5ರಂದು ಹರಿಹರದಿಂದ ಆರಂಭವಾದ ಪಾದಯಾತ್ರೆ ದಾವಣಗೆರೆ, ಆನಗೋಡು, ಹೆಬ್ಬಾಳ, ಹುಣಸೆಕಟ್ಟೆ, ಎಮ್ಮೆಹಟ್ಟಿ, ಭರಮಸಾಗರ, ಹೆಗ್ಗೆರೆ, ಕೊಳ ಹಾಳ್, ಚಿಕ್ಕಬೆನ್ನೂರು, ಸಿರಿಗೆರೆ ಸರ್ಕಲ್, ಕಲ್ಕುಂಟೆ, ವಿಜಾಪುರ, ಬೀರಾವರ ಮಾರಘಟ್ಟ ಮಾರ್ಗವಾಗಿ ಸಾಗಿ, 9ರಂದು ರಾತ್ರಿ ಮಠದ ಕುರುಬರಹಟ್ಟಿಯಲ್ಲಿ ವಾಸ್ತವ್ಯ ಹೂಡಿತ್ತು. ಸೋಮವಾರ ನಗರ ಪ್ರವೇಶಿಸಿ, ಸಭೆ ನಡೆಸುವ ಮೂಲಕ ಗಮನ ಸೆಳೆಯಿತು.

ನಂತರ ಇಲ್ಲಿಂದ ಬೆಂಗಳೂರಿನತ್ತ ಮುಖಮಾಡಿತು.ಮಾ.21ರಂದು ಫ್ರೀಡಂ ಪಾರ್ಕ್ ತಲುಪಲಿದೆ. ಅಲ್ಲಿ ಬಹಿರಂಗ ಸಭೆ ನಡೆಸುವ ಮೂಲಕ ಒಳ ಮೀಸಲು ಜಾರಿಗೆ ಒತ್ತಾಯಿಸಲಾಗುವುದು. ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ದಲಿತ ಪರ ಹೋರಾಟಗಾರರು ತಿಳಿಸಿದರು.

ಮುಖಂಡರಾದ ಬಿ.ಆರ್.ಭಾಸ್ಕರ್ ಪ್ರಸಾದ್, ಕೆ.ಮಹಲಿಂಗಪ್ಪ ಕುಂಚಿಗನಾಳ್, ಶಿವರಾಜ್, ಎಚ್.ಕೆಂಚರಾಯಪ್ಪ ಪಾವಗಡ, ಎಸ್.ಮಲಿಯಪ್ಪ, ಕೆ.ರಾಜು, ಎಂ.ಆರ್.ಶಿವರಾಜು, ಅನಿಲ್ ಎಸ್.ಅಳಗವಾಡಿ, ಪ್ರಭುರಾಜ್ ಕೊಡ್ಲಿ, ಎನ್.ವಿ.ಸುರೇಶ್, ಕಸ್ತೂರಿ ಮಂಜುನಾಥ್ ಸಂಡೂರು, ಮಾರುತಿ ವಿಜಯಪುರ, ಪ್ರಭಾಕರ್ ಚಿಕ್ಕಬಳ್ಳಾಪುರ, ಬಾಳೆಕಾಯಿ ಶ್ರೀನಿವಾಸ್, ತಿಪ್ಪೇಸ್ವಾಮಿ, ಜೆ.ಜೆ.ಹಟ್ಟಿ ಶಿವಣ್ಣ, ಕರಿಯಣ್ಣ, ಮಾರಣ್ಣ, ವಿನೋದ್‌ಕುಮಾರ್, ಅಭಿಷೇಕ್, ಲಕ್ಷ್ಮಣ್ ಭಂಡಾರಿ, ನರಹರಿ, ರಘು, ಕುಮಾರಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net