

ಚಿತ್ರದುರ್ಗ:ನಗರದ ವೈದ್ಯ ಡಾ.ಕೆ.ವಿ.ಸಂತೋಷ್ ಅವರು ಇತಿಹಾಸ ಸಂಶೋಧನೆಯಲ್ಲೂ ಗುರುತಿಸಿಕೊಂಡಿದ್ದಾರೆ.ಹೊಳಲ್ಕೆರೆ ತಾ ಲೂಕು ದರ್ಶನ ಅವರ ಸಂಶೋಧನಾ ಪ್ರವೃತ್ತಿಗೆ ನಿದರ್ಶನವಾಗಿದೆ. ಸಂತೋಷ್ ಅವರು ರಾಜಕಾರಣಗಿಂತ ಗ್ರಾಮ ಚರಿತ್ರೆ ಅಧ್ಯಯನ ವು,ಇತಿಹಾಸಕ್ಕೆ ಪರಿಪೂ ರ್ಣತೆ ಒದಗಿಸುತ್ತದೆ ಎಂಬ ಸಿದ್ಧಾಂತದಲ್ಲಿ ನಂಬಿಕೆ ಉಳ್ಳವರಾಗಿದ್ದಾರೆ ಎಂದು ಕೃತಿ ಪರಿಚಯಿಸಿರುವ ಲೇಖಕ ಮಹೇಶ್‌ಕುಂಚಿಗನಾಳ್ ತಿಳಿಸಿದ್ದಾರೆ.
ಸಂತೋಷ್ ಅವರು ತಾಲೂಕು ದರ್ಶನ ಸರಣಿ ಕೃತಿಯಲ್ಲಿ, 2ನೇ ಪುಸ್ತಕ ಚಿತ್ರದುರ್ಗ ತಾಲೂಕು ದರ್ಶನ ಮುಂದಿನ ವಾರ ಚಿತ್ರದುರ್ಗದಲ್ಲಿ ಬಿಡುಗಡೆಯಾಗಲಿದೆ. 415 ಪುಟಗಳ ಈ ಕೃತಿಯಲ್ಲಿ ಏಳು ಅಧ್ಯಾಯಗಳಲ್ಲಿ ವಿಷಯ ಮಂಡಿಸಲಾಗಿದೆ. ಚಿತ್ರದುರ್ಗ ತಾಲೂಕಿನ ಗ್ರಾಮಗಳ ನೇರಪರಿಚಯದ ಪೂರ್ವಭಾಗಿಯಾಗಿ ಚಿತ್ರದುರ್ಗ ತಾಲೂಕಿನ ವಿಸ್ತೀರ್ಣ,ಭೌಗೋಳಿಕ ಪರಿಚಯ, ಚರಿತ್ರೆ, ಸಮಾಜ ಸಂಸ್ಕೃತಿ, ನಗರ ಪರಿ ಚಯ, ಗ್ರಾಮ ದರ್ಶನ, ಮಠಗಳು, ಆಶ್ರಮಗಳ ಮಾಹಿತಿ ನೀಡಿ ನಂತರ ಆಯಾ ಸ್ಥಳದ ಐತಿಹಾಸಿಕ ಸ್ಮಾರಕಗಳ ಚರ್ಚೆಗೆ ಒತ್ತು ನೀಡಿದ್ದಾರೆ. ಗ್ರಾಮ ಅಧ್ಯಯನವನ್ನು ಸಂಶೋಧನೆಯ ವಿವಿಧ ನೆಲೆಗಳಲ್ಲಿ ಗಮನಿಸುವುದರಿಂದ ಇದನ್ನು ಒಂದು ಮಿನಿ ಗ್ಯಾಸೆಟಿಯರ್ ಎಂದರೂ ಸಹ ತಪ್ಪಾಗಲಾರದು.
ಪ್ರಸ್ತುತ ಕೃತಿಯ ಚಿತ್ರದುರ್ಗ ಏಕೈಕ ನದಿಯಾದ ಜಿನಗಿಹಳ್ಳವು ಓಬಳ ದೇವರ ಗುಡ್ಡದಲ್ಲಿ ಹುಟ್ಟಿ ಚಿನ್ನಹಗರಿಯಾಗಿ ರೂಪು ತಳೆಯುವ ಬಗೆಗೆ ಅವರು ನೀಡಿರುವ ಮಾಹಿತಿ ಕುತೂಹಲಕಾರಿಯಾಗಿದೆ ಎಂದು ಮಹೇಶ್ ಅಭಿಪ್ರಾಯಪಟ್ಟಿದ್ದಾರೆ. ಹಬ್ಬ,ಜಾತ್ರೆಗಳಂತಹ ವಿಷಯಗಳಿಗೂ ಕೃತಿಯಲ್ಲಿ ಮಹತ್ವದ ಸ್ಥಾನವಿದೆ.
ನಗರ ಪ್ರದೇಶದ ದೇವಾಲಯಗಳನ್ನೂ ಪರಿಚಯಿಸಲಾಗಿದೆ. ಗ್ರಾಮದ ಸ್ಥಳನಾಮದ ಉಗಮ,ಐತಿಹ್ಯ,ಅಲ್ಲಿರುವ ದೇವಾಲಯ ಗಳನ್ನು ಕೃತಿ ಪ ರಿಚಯಿಸುತ್ತಿದ್ದು,ಗ್ರಾಮೀಣ ಸ್ಥಳೀಯ ಚರಿತ್ರೆಗಳ ಕೊರತೆ ನೀಗಿಸುವಲ್ಲಿ ಕೃತಿ ಯಶಸ್ವಿಯಾಗಿದೆ.