

ಚಿತ್ರದುರ್ಗ: ಚಿತ್ರದುರ್ಗ ಪೊಲೀಸ್ ಉಪವಿಭಾಗದ ಡಿವೈಎಸ್‌ಪಿಯಾಗಿ ಕೆ.ದಿನಕರ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ತುಮಕೂರು ಮೂಲದ, 2020ರ ಕೆಎಸ್‌ಪಿಎಸ್ ಬ್ಯಾಚ್ ಅಧಿಕಾರಿ ದಿನಕರ್, 2021ರಲ್ಲಿ ಚಿತ್ರದುರ್ಗದಲ್ಲಿ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿದ ಬಳಿಕ ಉಡುಪಿ ಡಿವೈಎಸ್‌ಪಿಯಾಗಿ 2022ರಲ್ಲಿ ಡಿಸೆಂಬರ್ ನೇಮಕವಾಗಿದ್ದರು. ಈಗ ಸರ್ಕಾರ ಅವರನ್ನು ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಿದೆ.