ಚಿತ್ರಕಲೆಯಲ್ಲಿ ಪೊನ್ನಾಚಿ ಶಾಲೆ ಪ್ರಥಮ

15rajesh8
Published on

ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಬಿರ್ಸಾಮುಂಡಾ ಜಯಂತಿ ಕಾರ್ಯಕ್ರಮದಲ್ಲಿ ಚಿತ್ರಕಲೆ ಮತ್ತು ನೃತ್ಯ ವಿಭಾಗದಲ್ಲಿ ಹನೂರು ತಾಲೂಕಿನ ಪೊನ್ನಾಚಿ ಬುಡಕಟ್ಟು ಆಶ್ರಮ ಶಾಲೆಯ ವಿದ್ಯಾರ್ಥಿಗಳು ಮೊದಲ ಬಹುಮಾನ ಗಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ವಿದ್ಯಾರ್ಥಿಗಳು ಪೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಈ ವೇಳೆ ಶಾಲೆಯ ಮುಖ್ಯ ಶಿಕ್ಷಕ ಸಿದ್ದು ಮಹಾದೇವ್, ಆನಂದ್, ರಂಗ ಮಾದಪ್ಪ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net