ಚಿತ್ರಕಲಾ ಪ್ರದರ್ಶನಕ್ಕೆ ಆರ್ಟ್ ಗ್ಯಾಲರಿ

bkt-29-3
Published on

ಬಾಗಲಕೋಟೆ: ಬೆಂಗಳೂರಿನಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ ಮಾದರಿಯಯಂತೆ ಬಾಗಲಕೋಟೆಯಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣ ಮಾಡುವ ಯೋಜನೆ ಇದೆ ಎಂದು ಬಿ.ವ್ಹಿ.ವ್ಹಿ.ಸಂಘದ ಕಾರ್ಯಾಧ್ಯಕ್ಷರು,ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.

ನಗರದ ಪ್ರತಿಷ್ಠಿತ ವೀರಶೈವ ವಿದ್ಯಾರ್ವಧಕ ಸಂಘ,ಬಾಗಲಕೋಟೆ, ಬಸವೇಶ್ವರ ಕಲಾ ಮಹಾವಿದ್ಯಾಲಯ ಬಾಗಲಕೋಟೆ ಹಾಗೂ ಸೋಮಶೇಖರ ಸಾಲಿ ಪ್ರತಿಷ್ಠಾನ ವಿಜಯಪುರ ಇವರ ಸಹಯೋಗದಲ್ಲಿ ಸೋಮಶೇಖರ ಸಾಲಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾ ಭವನದಲ್ಲಿ ಎರಡು ದಿನಗಳ ಕಾಲ ನಡೆದ ಚಿತ್ರಪ್ರದರ್ಶನವನ್ನು ವಿಕ್ಷಣೆ ಮಾಡಿ ಮಾತನಾಡಿದರು.

ಬಾಗಲಕೋಟೆಯವರಾದ ಸೋಮಶೇಖರ ಸಾಲಿ ಅವರು ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಶ್ರೇಷ್ಠ ಕಲಾವಿದರಾಗಿದ್ದರು, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ,ಕರ್ನಾಟಕ ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷರಾಗಿ ಬಾಗಲಕೋಟೆಗೆ ಹೆಸರು ಕೀರ್ತಿ ತಂದವರು, ಅವರ ಕಲಾಕೃತಿಗಳನ್ನು ಪ್ರದರ್ಶನ ಮಾಡಿದ್ದು ಶ್ಲಾಘನಿಯ, ಬಾಗಲಕೋಟೆ ಕಲಾ ಪರಂಪರೆಯ ನಗರವಾಗಿದ್ದು ಜಿಲ್ಲೆಯಲ್ಲಿ ಸಾಕಷ್ಟು ಹೆಸರಾಂತ ಚಿತ್ರಕಲಾವಿದರಿದ್ದಾರೆ, ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಜಿಲ್ಲೆಯಲ್ಲಿ ಉತ್ತಮವಾದ ಆರ್ಟ್ ಗ್ಯಾಲರಿ ಅಗತ್ಯತೆ ಇದ್ದು, ಬೆಂಗಳೂರಿನಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ ಮಾದರಿಯಯಂತೆ ಬಾಗಲಕೋಟೆಯಲ್ಲಿ ಆರ್ಟ್ ಗ್ಯಾಲರಿ ನಿರ್ಮಾಣ ಮಾಡುವ ಯೋಜನೆ ಇದೆ ತಿಳಿಸಿದರು.

ಈ ಸಂಧರ್ಭದಲ್ಲಿ ಸೋಮಶೇಖರ ಸಾಲಿ ಅವರ ಸುಪತ್ರರಾದ ವಿದ್ಯಾಧರ ಸಾಲಿ,ಮಹಾಗುಂಡಯ್ಯ ಸಾಲಿ, ನೀತಿನ ಸಾಲಿಮಠ, ಬಸವರಾಜ ಗೌಡರ, ಇದ್ದರು. ಎರಡು ದಿನಗಳ ಕಾಲ ನಡೆದ ಚಿತ್ರ ಪ್ರದರ್ಶನ ಎಲ್ಲರ ಗಮನ ಸಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net