ಚಿತ್ರಕಲಾ ಪ್ರದರ್ಶನ ಇಂದು

web
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ, ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಜು. 23ರಂದು ಬೆಳಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ ಎಂದು ಆಯೋಜಕ ಪ್ರೊ. ಸಿ.ಎಸ್. ಪಾಟೀಲ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾನಪದ ವಿವಿ ಸಂಶೋಧನಾಧಿಕಾರಿ ಡಾ. ಕೆ. ಪ್ರೇಮಕುಮಾರ ಕಾರ್ಯಕ್ರಮ ಉದ್ಘಾಟಿಸುವರು. ಹಂಪಿ ಕನ್ನಡ ವಿವಿ ದೃಶ್ಯಕಲಾ ವಿಭಾಗದ ಮುಖ್ಯಸ್ಥ ಡಾ. ಮೋಹನರಾವ್ ಪಂಚಾಳ ಅವರು ಎಸ್.ಸಿ. ಪಾಟೀಲ ಚಿತ್ರಕಲೆಗಳ ಬಗ್ಗೆ ಮಾತನಾಡಲಿದ್ದಾರೆ. ರೋಟರಿ ಕ್ಲಬ್ ಅಧ್ಯಕ್ಷ ಪ್ರೊ. ಎಸ್.ಟಿ. ನಂದಿಬೇವೂರ ಅತಿಥಿಗಳಾಗಿ ಆಗಮಿಸುವರು. ಪ್ರೊ. ಎಸ್.ಸಿ. ಪಾಟೀಲ ಅಧ್ಯಕ್ಷತೆ ವಹಿಸುವರು ಎಂದರು.
ಡಾ. ಪ್ರೇಮಾನಂದ ಲಕ್ಕಣ್ಣವರ ವಿರಚಿತ ’ಕರ್ನಾಟಕ ಚಿತ್ರಕಲಾ ಸಾಹಿತ್ಯ: ಒಂದು ವೈಚಾರಿಕ ಅಧ್ಯಯನ ಗ್ರಂಥ’ವನ್ನು ಕವಿವಿ ಪ್ರಸಾರಂಗದ ನಿರ್ದೇಶಕ ಡಾ. ಚಂದ್ರಶೇಖರ ರೊಟ್ಟಿಗವಾಡ, ಪ್ರೊ. ಎಸ್.ಸಿ.ಪಾಟೀಲರ ’ವಚನಕಾರ ಹಂಡೆ ಚಂದಿಮರಸನ ಶಾಸಕನಗಳು ಗ್ರಂಥ’ವನ್ನು ಕವಿವಿ ಕನ್ನಡ ಸಂಶೋಧನಾ ಸಂಸ್ಥೆ ವಿಶ್ರಾಂತ ನಿರ್ದೇಶಕ ಡಾ. ಎಸ್.ಬಿ. ಹಿರೇಮಠ ಬಿಡುಗಡೆ ಮಾಡುವರು ಎಂದರು.
2023ನೇ ಸಾಲಿನ ಅತ್ಯುತ್ತಮ ಕಲಾವಿದ ಪ್ರಶಸ್ತಿಯನ್ನು ಧಾರವಾಡದ ಎಸ್.ಬಿ. ಜೆರಳಿ, ಜೆ.ವಿ. ಕಮ್ಮಾರ, ಎನ್.ಎಂ. ದಾಟನಾಳ, ಸಿ.ಜಿ.ಪಾಟೀಲ, ಹುಬ್ಬಳ್ಳಿ ಲತಾರಾಣಿ ಮಲ್ಹಾರ ಅವರಿಗೆ ನೀಡಲಿದ್ದು, ಕಿರಣ ಶೇರಖಾನೆಗೆ ವಿಶೇಷ ಸನ್ಮಾನ ಜರಗಲಿದೆ ಎಂದರು.
ಶಶಿಕಲಾ ಪಾಟೀಲ, ಡಾ. ಬಸವರಾಜ ಕುರಿಯವರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net