ಚಿತ್ತಾಪುರದಲ್ಲಿ ವಿಎಚ್‌ಪಿಯಿಂದ ನಾಗ ಪ್ರತಿಮೆಗಳಿಗೆ ಪೂಜೆ

PH 08
Published on

ಚಿತ್ತಾಪುರ: ತಾಲೂಕಿನಲ್ಲಿ ಸೋಮವಾರ ಸಂಭ್ರಮದಿಂದ ನಾಗರ ಪಂಚಮಿ ಹಬ್ಬ ಆಚರಿಸಲಾಯಿತು. ಮಹಿಳೆಯರು ಹಾಗೂ ಯುವತಿಯರು ಬೆಳಗ್ಗೆಯೇ ಹೊಸ ಬಟ್ಟೆಗಳನ್ನು ಧರಿಸಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ರಾಯಲ್ ಮೈದಾನದಲ್ಲಿ ವಿಶ್ವ ಹಿಂದು ಪರಿಷತ್‌ನಿಂದ ವಿಶೇಷವಾಗಿ ನಾಗರ ಪಂಚಮಿ ಆಚರಿಸಲಾಯಿತು. ನಾಗ ಪ್ರತಿಮಗಳಿರುವ ಸ್ಥಳವನ್ನು ಶುಚಿಗೊಳಿಸಿ, ವಿವಿಧ ಫಲ-ಪುಷ್ಪಗಳಿಂದ ಅಲಂಕಾರ ಮಾಡಲಾಯಿತು. ಮಂಜುನಾಥ ಶಾಸ್ತಿç, ಕರಬಸಯ್ಯ ಶಾಸ್ತಿç ಸಂಗಡಿಗರು ವಿಶೇಷ ಅರ್ಚನೆ, ಮಂತ್ರ ಪಠಣ ಮಾಡಿದರು. ಬಳಿಕ ಎಲ್ಲ ಪ್ರತಿಮೆಗಳನ್ನು ಅಭಿಷೇಕ ನೆರವೇರಿಸಲಾಯಿತು. ಕಡಲೆ, ಅಳ್ಳು, ತಂಬಿಟ್ಟು, ಉಂಡಿ ಸೇರಿ ಇನ್ನಿತರ ವಸ್ತುಗಳನ್ನು ದೇವರಿಗೆ ನೈವೇದ್ಯ ಅರ್ಪಿಸಿದರು.

ಪುರಸಭೆ ಸದಸ್ಯ ಶ್ಯಾಮ ಮೇಧಾ, ವಿಎಚ್‌ಪಿ ವಿಭಾಗೀಯ ಸಹ ಕಾರ್ಯದರ್ಶಿ ಅಂಬರೇಶ ಸುಲೇಗಾಂವ್, ತಾಲೂಕು ಅಧ್ಯಕ್ಷ ಶ್ರೀನಿವಾಸ ಹಳ್ಳಿ, ಪ್ರಮುಖರಾದ ಸಿದ್ರಾಮಪ್ಪ ರೇಷ್ಮಿ, ಚಂದ್ರಕಾಂತ ದೊಡ್ಮನಿ, ರಾಚಪ್ಪ ಬೊಮ್ಮನಳ್ಳಿ, ನಿರ್ಮಲಾ ಭಂಗಿ, ಶೀವಲೀಲಾ ಹಿರೇಮಠ, ಸಾಬಣ್ಣ ಪೂಜಾರಿ, ಅಜಯ ಬಿದ್ರಿ, ಮೇಘರಾಜ ಗುತ್ತೇದಾರ್, ಚಂದ್ರಕಾAತ ಗುತ್ತೇದಾರ್, ವಿಜಯಕುಮಾರ ಮಡಿವಾಳ, ಮಲ್ಲಿಕಾರ್ಜುನ ಮುಗಳನಾಗಾಂವ್, ಹಳ್ಳೆಪ್ಪ ಉಪ್ಪಾರ್, ಸಂತೋಷ ಹಾವೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net