

ಚಿತ್ತಾಪುರ: ವಿಶ್ವ ಹಿಂದು ಪರಿಷತ್, ಮಾತೃಶಕ್ತಿ ದುರ್ಗಾವಾಹಿನಿ ಸಂಘಟನೆಯಿAದ ವಿಜಯದಶಮಿ ನಿಮಿತ್ತ ಪಟ್ಟಣದಲ್ಲಿ ಸಂಭ್ರಮದಿAದ ದುರ್ಗಾ ದೌಡ್ ಶೋಭಾಯಾತ್ರೆ ಭಾನುವಾರ ನಡೆಯಿತು.
ಅಕ್ಕಮಹಾದೇವಿ ಮಂದಿರದ ಬಳಿ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಚಿತಾವಲಿ ಚೌಕ್, ಜನತಾ ಚೌಕ್, ಪಾಲಪ್ ಬಡಾವಣೆ, ಹೋಳಿಕಟ್ಟಿ, ತೇಳಗೇರಿ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ಅಕ್ಕಮಹಾದೇವಿ ಮಂದಿರಕ್ಕೆ ತಲುಪಿ ಸಮಾವೇಶಗೊಂಡಿತು. ಯುವತಿಯರು ಭಾರತಾಂಬೆ ಹಾಗೂ ದುರ್ಗಾಮಾತೆಯ ವೇಷಧರಿಸಿ ಹೆಜ್ಜೆಹಾಕಿದರು. ಎಲ್ಲಡೆ ಕೇಸರಿ ಧ್ವಜಗಳು ರಾರಾಜಿಸಿದವು. ಭಾರತ್ ಮಾತಾಕೀ ಜೈ ಸೇರಿ ಇನ್ನಿತರ ಘೋಷಣೆಗಳು ಮೊಳಗಿದವು.
ಪ್ರಮುಖರಾದ ನಿರ್ಮಲಾ ಭಂಗಿ, ರೇಣುಕಾ ಬಿರಾದಾರ, ಶ್ರುತಿ ತಾವರೆ, ಇಂದಿರಾರೆಡ್ಡಿ ಕೊಳ್ಳಿ, ಶಿವಲೀಲಾ ಮಠಪತಿ, ಲಕ್ಷ್ಮೀ ಮಟ್ಟಿ, ಶ್ವೇತಾ ಪಾಟೀಲ್, ಸುಲೋಚನಾ ಸೂರ್ಯವಂಶಿ, ಸಕ್ಕೂಬಾಯಿ ಕುಲಕರ್ಣಿ, ಅಂಬರೇಷ ಸುಲೇಗಾಂವ್, ಶ್ರೀನಿವಾಸ ಹಳ್ಳಿ, ಪ್ರಲ್ಹಾದ್ ವಿಶ್ವಕರ್ಮ, ವೀರಣ್ಣ ಶಿಲ್ಪಿ, ಕೋಟೇಶ್ವರ ರೇಷ್ಮಿ, ಬಸವರಾಜ ಹೂಗಾರ, ಮಹಾದೇವ ಅಂಗಡಿ, ಗಿರೀಶ್ ಬೊಮ್ಮನಳ್ಳಿ, ಸಾಬಣ್ಣ ಪೂಜಾರಿ, ಆನಂದ ಪಾಟೀಲ್ ನರಿಬೋಳ, ಮಂಜುನಾಥ ಶಾಸ್ತಿç, ನಾಗರಾಜ ಹೂಗಾರ, ಮಲ್ಲಿಕಾರ್ಜುನರೆಡ್ಡಿ ಬಜಾರ್, ಅಜಯಕುಮಾರ ಬಿದರಿ, ಶ್ಯಾಮ್ ಮೇಧಾ, ರಾಜು ಕಲಶೆಟ್ಟಿ ಇತರರಿದ್ದರು.