

ಚಿತ್ತಾಪುರ: ಶ್ರೀ ಕೃಷ್ಣಜನ್ಮಾಷ್ಟಮಿ ನಿಮಿತ್ತ ಬ್ರಾಹ್ಮಣ ಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ರಾತ್ರಿ ವಿವಿಧ ಕಾರ್ಯಕ್ರಮ ನಡೆದವು. ಬಡಾವಣೆಯ ಮಕ್ಕಳು ಮಕ್ಕಳು ಕೃಷ್ಣ ರಾಧೆಯರ ವೇಷಧರಿಸಿ ನೃತ್ಯ ಮಾಡಿದರು.
ಬಳಿಕ ಕೋಲಾಟವಾಗಿ ಗಮನಸೆಳೆದರು. ಮಹಿಳೆಯರಿಂದ ಬಾಲ ಗೋಪಾಲನ ತೊಟ್ಟಿಲೋತ್ಸವ ಜರುಗಿತು. ನಂತರ ಕೃಷ್ಣನಿಗೆ ಅರ್ಘ್ಯ ಪ್ರಧಾನ ಮಾಡುವ ಮೂಲಕ ಕಾರ್ಯಕ್ರಮ ಸಮಾರೋಪಗೊಳಿಸಲಾಯಿತು.
ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಗಿರೀಶ ಜಾನೀಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್, ಪ್ರಮುಖರಾದ ರವಿ ಮಾಸ್ಟರ್, ರಾಮಾಚಾರಿ ಜೋಶಿ, ಪ್ರಕಾಶ ಹಣಿಕೇರಿ, ಸಂಜೀವ ಜಾನೀಬï, ರಾಘವೇಂದ್ರ ರಾವ್, ಭೀಮಾಚಾರಿ ಜೋಶಿ, ಭಂಡಾಚಾರಿ ಜೋಶಿ, ರಾಘು ಡೊಣಗಾಂವ್, ಗುರುರಾಜ ಜೋಶಿ, ವೆಂಕಟೇಶ ಕುಲಕರ್ಣಿ ರಾಜೋಳಾ, ಸುಂದರಭಾಯಿ ಅಣಿಕೇರಿ, ಸ್ವಾತಿ ಕುಲಕರ್ಣಿ, ಕಾವೇರಿ ಜೋಶಿ, ಲಕ್ಷ್ಮಿ ಮೋರೆ, ಶ್ರುತಿ ಜಾನೀಬ್ ಇತರರಿದ್ದರು.