ಚಿತ್ತಾಪುರ; ಸಾಹಿತ್ಯ ಜ್ಯೋತಿ ಮನೆ ಮನಕ್ಕೆ ತಲುಪಿಸಿ

PH 03
Published on

ಚಿತ್ತಾಪುರ: ತಾಲೂಕು ಮಟ್ಟದ ಅಕ್ಷರ ಜಾತ್ರೆ ಯಶಸ್ವಿಯಾಗಿ ನಡೆಯಲಿ. ಜನರ ಮನೆ ಮನಕ್ಕೆ ಸಾಹಿತ್ಯ ಜ್ಯೋತಿ ತಲುಪಿಸುವ ಕಾರ್ಯವಾಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ನಾಗಾವಿ ನಾಡಿನಲ್ಲಿ ಅಕ್ಷರೋತ್ಸವ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ವಿಷಯ. ಪ್ರತಿಯೊಬ್ಬರೂ ಸಾಹಿತ್ಯ ಜ್ಞಾನ ಹೊಂದುವುದು ಮುಖ್ಯ. ಕನ್ನಡ ಸಾಹಿತ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಜವಾಬ್ದಾರಿ ಪ್ರತಿ ಕನ್ನಡಿಗನ ಮೇಲಿದೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ವೀರೇಂದ್ರ ಕೊಲ್ಲೂರ ಮಾತನಾಡಿ, ಸಮ್ಮೇಳನದ ಸಿದ್ಧತೆ ಭರದಿಂದ ಸಾಗಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳಿAದ ಕಲೆ ಪ್ರದರ್ಶನಗೊಳ್ಳಲಿದೆ. ತಾಲೂಕಿನ ಇತಿಹಾಸ ಮೆಲುಕು ಹಾಕುವ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ ಎಂದು ತಿಳಿಸಿದರು.

ಸಿಪಿಐ ಪ್ರಕಾಶ ಯಾತನೂರ ಮಾತನಾಡಿದರು. ತಹಸೀಲ್ದಾರ್ ಸೈಯದ್ ಪಾಷಾವಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಪ್ರಮುಖರಾದ ಮಲ್ಲಿಕಾರ್ಜುನ ಎಮ್ಮೆನೋರ, ತಮ್ಮಣ್ಣ ಡಿಗ್ಗಿ, ಮಲ್ಲಿಕಾರ್ಜುನ ಕಾಳಗಿ, ದೇವಿಂದ್ರ ಕುಮಸಿ, ರಾಮಲಿಂಗ ಬಾನರ್, ಭೀಮಣ್ಣ ಹೊತ್ತಿನಮಡಿ, ಮಲ್ಲಿಕಾರ್ಜುನ ಬೊಮ್ನಳ್ಳಿ, ಮಲ್ಲಿಕಾರ್ಜುನ ಬೆಣ್ಣೂರಕರ್, ನರಸಿಂಹ ಆಲಮೇಲಕರ್, ನಟರಾಜ ಶಿಲ್ಪಿ, ಆನಂದ ಕಲ್ಲಕ, ನಾಗಯ್ಯ ಸ್ವಾಮಿ ಅಲ್ಲೂರ, ಮಡಿವಾಳಪ್ಪ ಹೇರೂರ, ರಾಯಪ್ಪ ಕೊಟ್ಟಗಾರ ಇತರರಿದ್ದರು.
ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜಗದೇವ ದಿಗ್ಗಾಂವಕರ್ ಸ್ವಾಗತಿಸಿದರು. ಮಲ್ಲಿಕಾರ್ಜುನ ಮೂಡಬುಳಕರ್ ನಿರೂಪಣೆ ಮಾಡಿದರು. ಕಾಶೀರಾಯ ಕಲಾಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net