

ಚಿತ್ತಾಪುರ: ತಹಸಿಲ್ ಕಚೇರಿಯಲ್ಲಿ ತಹಸೀಲ್ದಾರ್ ಸೈಯ್ಯದ್ ಷಾಷಾವಲ್ಲಿ ಅಧ್ಯಕ್ಷತೆಯಲ್ಲಿ ಶನಿವಾರ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತ್ಯೋತ್ಸವ ನಿಮಿತ್ತ ಪೂರ್ವಭಾವಿ ಸಭೆ ನಡೆಯಿತು.
ಈಡಿಗ ಸಮಾಜದ ತಾಲೂಕು ಅಧ್ಯಕ್ಷ ನಾಗಯ್ಯ ಗುತ್ತೇದಾರ್ ಮಾತನಾಡಿ, ಆ.31ರಂದು ಬೆಳಗ್ಗೆ ಪಟ್ಟಣದ ಹೊಸ ಕೋರ್ಟ್ ಹತ್ತಿರದಿಂದ ಗುರುಗಳ ಭಾವಚಿತ್ರದ ಭವ್ಯ ಮೆರವಣಿಗೆ, ವಿಶೇಷ ಉಪನ್ಯಾಸಕರನ್ನು ಕರೆಯಿಸುವುದು. ಸಮುದಾಯದ ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದು. ಹೀಗಾಗಿ ತಾಲೂಕು ಆಡಳಿತ ಸಹಕರಿಸಬೇಕೆಂದು ಮನವಿ ಮಾಡಿದರು.
ತಾಲೂಕು ಅಧಿಕಾರಿಗಳಾದ ಮನೋಜಕುಮಾರ ಗುರಿಕಾರ, ಸಂಜೀವಕುಮಾರ ಮಾನಕರ್, ಮಲ್ಲಣ್ಣ ದೇಸಾಯಿ, ಪಂಡೀತ್ ಸಿಂದೆ, ಸಂತೋಷಕುಮಾರ ಶಿರನಾಳ, ರೈಸ್ ಫಾತೀಮಾ, ಪ್ರಮುಖರಾದ ಶಂಕರಗೌಡ ರಾವೂರಕರ್, ಕಾಶಿನಾಥ ಗುತ್ತೇದಾರ, ಸುರೇಶ ಗುತ್ತೇದಾರ ಮಾತನಾಡಿದರು. ಶ್ರೀಮಂತ ಗುತ್ತೇದಾರ, ಪಂಕಜಗೌಡ್, ರವಿ ಗುತ್ತೇದಾರ, ಹುಸನಯ್ಯ ಗುತ್ತೇದಾರ, ಸ್ವಸ್ತಿಕ್ ಭಂಡಾರಿ, ಯಲ್ಲಯ್ಯಾ ಕಲಾಲ್, ದೇವಿಂದ್ರ ಆಲೂರ, ರಾಘವೇಂದ್ರ ಗುತ್ತೇದಾರ, ರಾಜು ಗುತ್ತೇದಾರ ಬೊಮ್ಮನಳ್ಳಿ, ಆನಂದ ಗುತ್ತೇದಾರ, ಅಶೋಕ ಗುತ್ತೇದಾರ ಹೊಸ್ಸುರ್, ಶರಣಬಸಪ್ಪ ಗುತ್ತೇದಾರ, ರಕ್ಷಿತ್ ಗುತ್ತೇದಾರ, ನರಸಯ್ಯ ಗುತ್ತೇದಾರ ಸೇರಿದಂತೆ ಇನ್ನಿತರರಿದ್ದರು.