ಚಿತ್ತಾಪುರ; ದಂಡಗುಂಡ ಬಸವಣ್ಣನ ರಥೋತ್ಸವ ಸೋಮವಾರ

PH 18
Published on

ಚಿತ್ತಾಪುರ: ದಂಡಗುಂಡದಲ್ಲಿ ಶ್ರೀ ಸಂಗನಬಸವ ಶಿವಾಚಾರ್ಯರ ನೇತೃತ್ವದಲ್ಲಿ ಶ್ರೀ ಬಸವಣ್ಣ ಜಾತ್ರಾ ಮಹೋತ್ಸವ ಭಾನುವಾರ, ಸೋಮವಾರ, ಮಂಗಳವಾರ ಸಂಭ್ರಮದಿಂದ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ತಿಳಿಸಿದೆ.

ಭಾನುವಾರ ಬೆಳಗ್ಗೆ ಗಂಗಾಸ್ಥಳ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಸೋಮವಾರ ಬೆಳಗ್ಗೆ ಬಸವಣ್ಣನಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಲಿದೆ. ಭಕ್ತರಿಂದ ನೈವೇದ್ಯ ಸೇವೆ ಜರುಗುವುದು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ, ಸಂಜೆ 4ಕ್ಕೆ ಕುಂಭ, ಕಳಸ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ಅಪಾರ ಭಕ್ತರ ಜೈ ಘೋಷದ ಮಧ್ಯೆ ಸಂಭ್ರಮದಿಂದ ರಥೋತ್ಸವ ನೆರವೇರಲಿದೆ. ಸೆ.5ರಂದು ಕುಸ್ತಿ ಸ್ಪರ್ಧೆ ನಡೆಯಲಿದೆ. ಕಲಬುರಗಿ, ಯಾದಗಿರಿ, ಚಿತ್ತಾಪುರ, ಜೇವರ್ಗಿ ಸೇರಿ ವಿವಿಧೆಡೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net