ಚಿತ್ತಾಪುರ: ತಾಲೂಕು ಮಟ್ಟದ ಬ್ಯಾಡ್ಮಿಂಟನ್​ ಕ್ರೀಡಾಕೂಟ

PH 09
Published on

ಚಿತ್ತಾಪುರ: ಆರೋಗ್ಯಯುತ ಮತ್ತು ಉತ್ಸಾಹಿ ಜೀವನಕ್ಕೆ ಬ್ಯಾಡ್ಮಿಂಟನ್ ಕ್ರೀಡೆ ಪೂರಕವಾಗಿವೆ ಎಂದು ವಿಶ್ವಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.

ಒಳಾಂಗಣ ಕ್ರೀಡಾಂಗಣದಲ್ಲಿ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಜನ್ಮದಿನ ನಿಮಿತ್ತ ಬ್ಯಾಡ್ಮಿಂಟನ್ ಅಸೋಸಿಯೇಷನ್ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿ, ಆಧುನಿಕ ಭಾರತ ಎಲ್ಲ ರಂಗದಲ್ಲಿಯೂ ಪ್ರಗತಿ ಸಾಧಿಸುತ್ತಿದೆ. ಕ್ರೀಡೆಯಲ್ಲಿ ನಮ್ಮ ಆಟಗಾರರು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ. ಪಠ್ಯದೊಂದಿಗೆ ಕ್ರೀಡೆಗೂ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಮುಖಂಡ ಭೀಮಣ್ಣ ಸಾಲಿ ಮಾತನಾಡಿದರು. ಅಸೋಸಿಯೇಷನ್ ಅಧ್ಯಕ್ಷ ಸಾಯಬಣ್ಣ ಕಾಶಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಚಂದ್ರಶೇಖರ ಕಾಶಿ, ಮುಕ್ತಾರ್ ಪಟೇಲ್, ಕಾಶೀನಾಥ ಗುತ್ತೇದಾರ್, ಸಂತೋಷ ಕಲಾಲ್, ಶ್ರೀನಿವಾಸ ಪೆಂದು, ರಾಜಶೇಖರ ಬಳ್ಳಾ, ಚಂದ್ರಶೇಖರ ಊಟಗೂರ, ಲಖನ್‌ಸಿಂಗ್ ರಜಪೂತ್, ರೋಹಿತ್, ಖದೀರ್, ಸುರೇಶ, ವಿಜಯ, ಶಾಕೀರ್, ಸಂಜೀವಕುಮಾರ, ಅಮಿತ್ ಜಮಶೆಟ್ಟಿ, ಶಿವುಕುಮಾರ ಶೀಲವಂತ, ಆಕಾಶ, ಸುನೀಲ್, ಬಾಬು ಕಾಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net