

ಚಿತ್ತಾಪುರ: ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪಟ್ಟಣದ ಅಂಬೇಡ್ಕರ್ ಚೌಕ್‌ನಿಂದ ತಹಸಿಲ್ ಕಚೇರಿವರೆಗೂ ಬಿಜೆಪಿ ರೈತ ಮೋರ್ಚಾದಿಂದ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್‌ನೊಂದಿಗೆ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಕಿಸಾನ್ ಸನ್ಮಾನ್ ಯೋಜನೆ, ರೈತ ವಿದ್ಯಾನಿಧಿ, ಶ್ರಮಶಕ್ತಿ, ಜಿಲ್ಲೆಗೊಂದು ಗೋಶಾಲೆ, ರೈತಸಂಪದ ಯೋಜನೆ ಮರು ಆರಂಭಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್, ತೊಗರಿ ಮಂಡಳಿ ಮಾಜಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಮುಖಂಡ ನಾಗರಾಜ ಹೂಗಾರ ಮಾತನಾಡಿದರು. ತಹಸಿಲ್ದಾರ್‌ಗೆ ಮನವಿಪತ್ರ ಸಲ್ಲಿಸಲಾಯಿತು. ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ್, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಪ್ರಕಾಶ ಪಾಟೀಲ್, ಪ್ರಮುಖರಾದ ಸಿದ್ರಾಮಪ್ಪ ರೇಷ್ಮೆ, ಶಶಿಧರ ಸೂಗೂರು, ಮಲ್ಲಿಕಾರ್ಜುನ ಪೂಜಾರಿ, ಶರಣಗೌಡ ಭೀಮನಹಳ್ಳಿ, ಶಿವಲಿಂಗಪ್ಪ ವಾಡೆದ್, ನಾಗರಾಜ ಬಂಕಲಗಿ, ರಮೇಶ್ ಬೊಮ್ಮನಹಳ್ಳಿ, ಆನಂದ ಪಾಟೀಲ್ ನರಿಬೋಳ, ತಮ್ಮಣ್ಣ ಡಿಗ್ಗಿ, ಅಕ್ಕಮಹಾದೇವಿ, ಶಿವರಾಮ ಚವ್ಹಾಣ್, ಪಂಕಜಗೌಡ ಗುತ್ತೇದಾರ್, ಶ್ರೀಕಾಂತ್ ಸುಲೇಗಾಂವ, ವಿಜಯಕುಮಾರ ಗುಂಡಗುರ್ತಿ, ಬಾಲಾಜಿ ಬುರಬುರೆ ಇತರರಿದ್ದರು.