ಚಿತ್ತಾಪುರ; ಕುರುಬ ಸಂಘಕ್ಕೆ ಹೊಸಳ್ಳಿ ತಾಲೂಕು ಅಧ್ಯಕ್ಷ

Basawaraj Hosalli
Published on

ಚಿತ್ತಾಪುರ: ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷರಾಗಿ ಬಸವರಾಜ ಹೊಸಳ್ಳಿ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾಜದ ಸಭೆಯಲ್ಲಿ ಮಾತನಾಡಿ, ಕುರುಬ ಸಮಾಜದ ಸಂಘಟನೆಯ ದೃಷ್ಟಿಯಿಂದ ವಿವಿಧ ಘಟಕದ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇನ್ನುಳಿದಂದ ಹಣಮಂತ ಪೂಜಾರಿ ಯಾಗಾಪುರ (ಕಾರ್ಯಾಧ್ಯಕ್ಷ), ಮಲ್ಲಿಕಾರ್ಜುನ ಪೂಜಾರಿ (ಪ್ರಧಾನ ಕಾರ್ಯದರ್ಶಿ), ರೇವಣಸಿದ್ದಪ್ಪ ದೊಡ್ಡಮನಿ (ಖಜಾಂಚಿ) ನೇಮಕವಾಗಿದ್ದಾರೆ ಎಂದರು.

ಪ್ರಮುಖರಾದ ಸಾಯಬಣ್ಣ ಪೂಜಾರಿ, ರವಿಗೊಂಡ ಕಟ್ಟಿಮನಿ, ನಿರ್ಮಲಾ ಬರಗಾಲಿ, ಗಣಪತಿ ಮಿಣಜಗಿ, ಭಗವಂತರಾಯಗೌಡ ಪಾಟೀಲ್, ತಿಪ್ಪಣ್ಣ ಗುಂಡಗುರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net