ಚಿಣ್ಣರ ಅಭಿರುಚಿ ಗುರುತಿಸಿ, ಪೋಷಿಸಿ

mysore
Published on

ಮೈಸೂರು:ಚಿಣ್ಣರ ಅಭಿರುಚಿಯನ್ನು ಗುರುತಿಸಿ, ಪೋಷಿಸುವ ಕೆಲಸವನ್ನು ಪಾಲಕರು ಮಾಡಬೇಕು ಎಂದು ಕರ್ನಾಟಕ ಶಿಲ್ಪಾಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ವೀರಣ್ಣ ಎಂ.ಅರ್ಕಸಾಲಿ ತಿಳಿಸಿದರು.

ಜೆಎಸ್‌ಎಸ್ ಮಹಾವಿದ್ಯಾಪೀಠದ ವತಿಯಿಂದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜು ಕಲಾ ಮಂಟಪದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ‘ಎಳೆಯರ ಮೇಳ-2025’ ಶಿಬಿರಕ್ಕೆ ಚಾಲನೆ ನೀಡಿ ವಾತನಾಡಿದರು.

ಸಾಹಿತ್ಯ, ಕಲೆಗಳಲ್ಲಿ ಆಸಕ್ತಿ, ಪರಿಣಿತಿ ಹೊಂದಿದರೆ ವ್ಯಕ್ತಿಯ ವ್ಯಕ್ತಿತ್ವಕ್ಕೆ ಮೆರುಗು ಬರುತ್ತದೆ. ಇಲ್ಲವಾದರೆ ಜೀವನವೇ ಬರುಡಾದಂತಾಗುತ್ತದೆ. ಪ್ರತಿಯೊಬ್ಬರಲ್ಲೂ ವಿಭಿನ್ನವಾದ ಶಕ್ತಿ, ಆಸಕ್ತಿ ಇರುತ್ತದೆ. ಅದನ್ನು ಶೋಧಿಸುವ ಕೆಲಸವಾಗಬೇಕು ಎಂದರು.

ಈಗಿನ ಮಕ್ಕಳು ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ. ಅವರ ಆಸಕ್ತಿ ಕೇಳದೆ, ಪಾಲಕರು ಅವರ ಇಚ್ಛೆಯ ಕಲಿಕೆಗೆ ಮಕ್ಕಳನ್ನು ಸಿಲುಕಿಸುತ್ತಿದ್ದಾರೆ. ಇದು ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದರು. ರಂಗ ನಿರ್ದೇಶಕ ಪ್ರೊ.ಎಸ್.ಆರ್. ರಮೇಶ್, ಜೆಎಸ್‌ಎಸ್ ಮಹಾವಿದ್ಯಾಪೀಠ ವಿಷಯ ಪರಿವೀಕ್ಷಕ ನಾಗರಾಜು, ರಂಗ ಸಂಯೋಜಕ ಚಂದ್ರಶೇಖರ್ ಆಚಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net