ಚಿಕ್ಲಿ ಗ್ರಾಪಂ ಅಧ್ಯಕ್ಷೆಯಾಗಿ ಸಿಂಧೆ ಆಯ್ಕೆ

Sharada Sindhe
Published on

ಬೀದರ್: ಕಮಲನಗರ ತಾಲ್ಲೂಕಿನ ಚಿಕ್ಲಿ(ಯು) ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷೆಯಾಗಿ ಶಾರದಾ ವೆಂಕಟರಾವ್ ಸಿಂಧೆ ಹಾಗೂ ಉಪಾಧ್ಯಕ್ಷೆಯಾಗಿ  ಲಲಿತಾಬಾಯಿ ದೇವದಾಸರಾವ್ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಾರದಾ ಸಿಂಧೆ ಮತ್ತು ಬಾಪುರಾವ್ ಭೋಸ್ಲೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಲಲಿತಾಬಾಯಿ ದೇವದಾಸರಾವ್ ಹಾಗೂ ಆಶಾಬಿ ಸಾದುಲ್ ಪಠಾಣ ನಾಮಪತ್ರ ಸಲ್ಲಿಸಿದ್ದರು. ಶಾರದಾ ಸಿಂಧೆ ಹಾಗೂ ಲಲಿತಾಬಾಯಿ ದೇವದಾಸರಾವ್ ಆಯ್ಕೆಯಾದರು.
21 ಸದಸ್ಯ ಬಲದ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಲಂಬಾಣಿ ಸಮುದಾಯದ ಮಹಿಳೆ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net