ಚಿಕ್ಕೋಡಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ ಆರಂಭಕ್ಕೆ ಗ್ರಹಣ

IMG20250526140358
Published on

ಚಿಕ್ಕೋಡಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟಿನ ಆರಂಭಕ್ಕೆ ಗ್ರಹಣ

ಆನಂದ ಭಮ್ಮನ್ನವರ ,ಚಿಕ್ಕೋಡಿ

ಬಡ ಜನರು, ಅಸಂಘಟಿತ ವಲಯದ ಕಾರ್ಮಿಕರು, ಬಡ ವಿದ್ಯಾರ್ಥಿಗಳಿಗೆ ಅಲ್ಪ ಮೊತ್ತದಲ್ಲಿ ಪೌಷ್ಟಿಕಾಂಶಯುತ ಆಹಾರ ಒದಗಿಸುವ ಕಾಂಗ್ರೆಸï ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನï ಯೋಜನೆಗೆ ಚಿಕ್ಕೋಡಿ ಪಟ್ಟಣದಲ್ಲಿ ಗ್ರಹಣ ಹಿಡಿದಿದೆ.

ಚಿಕ್ಕೋಡಿ ಪಟ್ಟಣದಲ್ಲಿ ಅದೃಷ್ಟ ಎಂಬಂತೆ ಬಡ ಜನರ ಅನುಕೂಲಕ್ಕಾಗಿ ಎರಡು ಇಂದಿರಾ ಕ್ಯಾಂಟಿನ ಮಂಜೂರಾಗಿವೆ. ಕ್ಯಾಂಟಿನಗಳ ಕಟ್ಟಡ ನಿರ್ಮಾಣ ಹಂತದಲ್ಲಿವೇ. ಕ್ಯಾಂಟಿನ ನಿರ್ಮಾಣ ಕಾರ್ಯ ಆಮೆ ಗತಿಯಲ್ಲಿ ನಡೆದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪಕ್ಕದಲ್ಲಿ ಒಂದು ಹಾಗೂ ಇನ್ನೊಂದು ಕಟ್ಟಡವನ್ನು  ನಿಪ್ಪಾಣಿ-ಚಿಕ್ಕೋಡಿ ರಸ್ತೆಯ ಹೆಸ್ಕಾಂ ಕಚೇರಿ ಬಳಿ ನಿರ್ಮಿಸಲಾಗುತ್ತಿದೆ.  ಆದರೆ ಎರಡು ಕಟ್ಟಡಗಳು ನಿರ್ಮಾಣ ಕೆಲಸ ವಿಳಂಬವಾಗಿದೆ. ಕಳೆದ ಮೂರು ವರ್ಷದಿಂದ ನಿರ್ಮಾಣ ಕೆಲಸ ನಡೆಯುತ್ತಿದೆ. ಆದರೆ ಕಾಮಗಾರಿ ಮಾತ್ರ ಮುಕ್ತಾಯವಾಗಿಲ್ಲ.

ಯಾಕೆ ಈ ವಿಳಂಬ?

ರಾಜ್ಯದಲ್ಲಿ ಮಂಜೂರಾದ ಬಹುತೇಕ ಎಲ್ಲಾ ಇಂದಿರಾ ಕ್ಯಾಂಟಿನ ನಿರ್ಮಾಣ ಗುತ್ತಿಗೆಯನ್ನು ಒಂದೆ ಖಾಸಗಿ ಸಂಸ್ಥೆ ಹೊಣೆ ಹೊತ್ತಿದೆ. ಪರಿಣಾಮ ಕಾಮಗಾರಿಗಳು ವೇಗ ಪಡೆಯುತ್ತಿಲ್ಲ. ಚಿಕ್ಕೋಡಿ ಪಟ್ಟಣದ ಎರಡು ಇಂದಿರಾ ಕ್ಯಾಂಟಿನ ಕಟ್ಟಡದ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿಲ್ಲ. ಒಂದು ಕ್ಯಾಂಟಿನ ನಿರ್ಮಾಣಕ್ಕೆ ೭೮ ಲಕ್ಷ ರೂ. ಸರ್ಕಾರ ವೆಚ್ಚ ಭರಿಸುತ್ತಿದೆ. ಗುತ್ತಿಗೆ ಪಡೆದ ಸಂಸ್ಥೆಯ ವಿಳಂಬ ನೀತಿಯಿಂದ ಬಡ ಜನರ ಅನ್ನದ ಬಟಲು ಮರಿಚಿಕೆಯಾಗಿದೆ.

ಭಾಕ್ಸ

ಒಂದು ಕಡೆ ಅನುಕೂಲ, ಇನ್ನೋಂದು ಕಡೆ ಅನಾನುಕೂಲ!

೪೫,೫೦೧ ಜನಸಂಖ್ಯೆ ಹೊಂದಿರುವ ಹಾಗೂ ಉಪ ವಿಭಾಗದ ಕಚೇರಿ ಹೊಂದಿರುವ ಚಿಕ್ಕೋಡಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಎರಡು ಇಂದಿರಾ ಕ್ಯಾಂಟಿನ ನಿರ್ಮಾಣದಿಂದ ಬಡ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಹೆಸ್ಕಾಂ ಕಚೇರಿ ಬಳಿ ನಿರ್ಮಾಣವಾಗುತ್ತಿರುವ ಕ್ಯಾಂಟಿನಿAದ ಸಾರ್ವಜನಿಕ ಆಸ್ಪತ್ರೆ, ಶಾಲಾ ಕಾಲೇಜು, ಬಸï ನಿಲ್ದಾಣದ ಸಮೀಪ ಇರುವುದರಿಂದ ಬಡ ಜನರಿಗೆ ಅನುಕೂಲವಾಗಲಿದೆ. ಆದರೆ ಬಿಇಒ ಕಚೇರಿ ಪಕ್ಕದಲ್ಲಿ ಹಾಗು ಶಾಸಕರ ಮಾದರಿ ಶಾಲೆ ಆವರಣದಲ್ಲಿ  ನಿರ್ಮಾಣವಾಗುತ್ತಿರುವ ಕ್ಯಾಂಟಿನನಿಂದ ಇಲ್ಲಿನ ಶಿಕ್ಷಣ ಇಲಾಖೆ ಕಚೇರಿ ಕೆಲಸಕ್ಕೆ, ಹಾಗೂ ಶಾಲಾ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ ಎಂಬ ಆರೋಪವು ಕೇಳಿ ಬಂದಿದೆ.

ಚಿಕ್ಕೋಡಿ ಪಟ್ಟಣದಲ್ಲಿ ಮಂಜೂರಾದ ಎರಡು ಇಂದಿರಾ ಕ್ಯಾಂಟಿನ ನಿರ್ಮಾಣ ಕಾಮಗಾರಿ ಕೊನೆ ಹಂತದಲ್ಲಿವೆ. ಪುರಸಭೆಯಿಂದ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು  ಸರ್ಕಾರದಿಂದ ಟೆಂಡರ್ ಕರೆಯಬೇಕಿದೆ .ಟೆಂಡರ್ ಪ್ರಕ್ರೀಯೆ ಮುಗಿದ ಕೂಡಲೇ ಕ್ಯಾಂಟೀನ ಆರಂಭಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net