ಚಿಕ್ಕೋಡಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಧಿಕಾರಿಗಳ ಭೇಟಿ

11Anand7
Published on

ಚಿಕ್ಕೋಡಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಧಿಕಾರಿಗಳ ಭೇಟಿ

ವಿಜಯವಾಣಿ ಸುದ್ದಿಜಾಲ,ಚಿಕ್ಕೋಡಿ:

ಇಲ್ಲಿನ ಬಾಣಂತಿಕೊಡಿಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕುರಿತು ದೂರು ಕೇಳಿ ಬಂದ ಹಿನ್ನೆಲೆ ಆರೋಗ್ಯ ಇಲಾಖೆಯ ವಿಭಾಗೀಯ ಸಹ ನಿರ್ದೇಶಕಿ ಡಾ. ಪುಷ್ಪಾ ದೊಡಮನಿ ಮತ್ತು ಜಂಟಿ ನಿರ್ದೇಶಕ ಡಾ. ಎಂ.ಎಸ್.ಪಲ್ಲೇದ ಅವರು ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಆಸತ್ರೆಯಲ್ಲಿನ ಸಮಸ್ಯೆಗಳ ಕುರಿತು ಪರಿಶೀಲಿಸಿದರು.

ತಾಯಿ ಮಕ್ಕಳ ಆಸತ್ರೆಯಲ್ಲಿನ ವೈದ್ಯರ, ಸಿಬ್ಬಂದಿಯ ಕೊರತೆ ಸೇರಿದಂತೆ ಸಿಬ್ಬಂದಿಯ ಕುಂದು ಕೊರತೆಗಳನ್ನು ಮತ್ತು ಆಸ್ಪತ್ರೆಯಲ್ಲಿನ ಕಾರ್ಯ ವೈಖರಿಯ ಬಗ್ಗೆ ಪರಿಶೀಲನೆ ನಡೆಸಿದರು.

ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಇದರ ಬಗ್ಗೆ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.

ತಾಲೂಕಾ ಆರೋಗ್ಯಾಧಿಕಾರಿ ಡಾ. ಸುಕುಮಾರ ಬಾಗಾಯಿ ತಾಯಿ ಮತ್ತು ಮಕ್ಕಳ ಆಸತ್ರೆಯ ವೈದ್ಯಾಧಿಕಾರಿ ಡಾ. ವಿಜಯಲಕ್ಷ್ಮೀ ಮುಸಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net