ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಲಿ

13Ckd2
Published on

ಚಿಕ್ಕೋಡಿ: ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡದಿದ್ದಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಹೋರಾಟ ನೇತೃತ್ವ ವಹಿಸಿರುವ ಸಂಪಾದನಾ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಇಲ್ಲಿನ ವಕೀಲರ ಸಂಘ ಚಿಕ್ಕೋಡಿ ಜಿಲ್ಲೆಯನ್ನಾಗಿಸಲು ಗುರುವಾರ ಕರೆ ನೀಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಈ ಕುರಿತು ಮೂರು ದಶಕಗಳಿಂದ ಹೋರಾಟ ಮಾಡಲಾಗುತ್ತಿದೆ. ಆದರೆ, ಜನಪ್ರತಿನಿಧಿಗಳ ಸ್ವಾರ್ಥ ಮನೋಭಾವ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಜಿಲ್ಲೆ ವಿಭಜನೆಗೆ ಹಿನ್ನೆಡೆಯಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಇತಿಹಾಸ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ವಕೀಲರ ಸಂಘದ ಪ್ರದಾನ ಕಾರ್ಯದರ್ಶಿ ಎಸ್.ಆರ್.ವಾಲಿ ಮಾತನಾಡಿ, ಅಂದಾಜು 350 ಕೀ.ಮೀ. ವ್ಯಾಪ್ತಿ ಹೊಂದಿರುವ ಬೆಳಗಾವಿ ಜಿಲ್ಲೆಯನ್ನು ಜನಸಾಮಾನ್ಯರ ದೃಷ್ಟಿಯಿಂದ ವಿಭಜಿಸಿ ಜಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಸುಭಾಷ ಯರನಾಳೆ ಮಾತನಾಡಿದರು. ಸಿ.ಬಿ.ಪಾಟೀಲ, ಬಿ.ಎನ್.ಪಾಟೀಲ, ವಿ.ಹಿ.ಮಾದಪ್ಪಗೋಳ, ಎನ್.ಡಿ.ದರಬಾರೆ, ಡಿ.ಆರ್.ಕೊಟೆಪ್ಪಗೋಳ, ಎಂ.ಜಿ.ಮೋಟನ್ನವರ, ಎಂ.ಬಿ.ಬನ್ನಿ, ಚೇತನ ಪಚಂಡಿ, ಎ.ಎ.ಚೌಗಲಾ, ಬೆಂಡವಾಡೆ, ಎಂ.ಎಸ್.ಈಟಿ, ಅಶೋಕ ಹರಗಾಪುರೆ, ಎಸ್.ಆರ್.ಸಗರೆ, ಮಹಾದೇವ ಬೆಂಡವಾಡೆ ಪುರಸಭೆ ಮಾಜಿ ಉಪಾಧ್ಯಕ್ಷ ಸಂಜಯ ಕವಟಗಿಮಠ, ಸಂಜಯ ಬಡಿಗೇರ, ಎಚ್.ಎಸ್.ನಸಲಾಪುರೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net