

ರಾಯಬಾಗ: ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರು ರಾಯಬಾಗ ವಕೀಲರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದ ಝೇಂಡಾ ಕಟ್ಟೆ ಬಳಿ ವಕೀಲರು ಪ್ರತಿಭಟಿಸಿ, ತಹಸೀಲ್ದಾರ್ ಸುರೇಶ ಮುಂಜೆಗೆ ಮನವಿ ಸಲ್ಲಿಸಿದರು.
ಬುಧವಾರ ನಡೆದ ಪ್ರಕರಣ ಒಂದರಲ್ಲಿ ವಕೀಲರನ್ನು ಬಂಧಿಸಲು ಮುಂದಾದಾಗ ಅವರ ಜತೆ ಇದ್ದ ಇನ್ನೊಬ್ಬ ವಕೀಲರು ಉಪವಿಭಾಗಾಧಿಕಾರಿ ವರ್ತನೆಯನ್ನು ಸ್ಥಳದಲ್ಲಿಯೇ ತೀವ್ರವಾಗಿ ಖಂಡಿಸಿರುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಉದ್ದಟತನ ಮೆರೆದಿರುವ ಎಸಿ ವಿರುದ್ಧ ಕ್ರಮ ಕೈಗೊಂಡು, ಕೂಡಲೇ ಬೇರೆಡೆ ವರ್ಗಾಯಿಸಬೇಕೆಂದು ಒತ್ತಾಯಿಸಿದರು. ಎಸಿ ಕಚೇರಿಯಲ್ಲಿ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನೂ ಬೇರೆಡೆ ವರ್ಗಾಹಿಸಬೇಕೆಂದು ಆಗ್ರಹಿಸಿದರು.
ಉಪವಿಭಾಗಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರೆಗೆ ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಿಂದ ಹೊರಗುಳಿಯುವುದಾಗಿ ಎಚ್ಚರಿಸಿದ್ದಾರೆ.
ವಕೀಲರ ಸಂದ ಉಪಾಧ್ಯ ಎಂ.ಎಂ.ಚಿಂಚಲಿಕರ, ಆರ್.ಎಸ್.ಶಿರಗಾಂವೆ, ವಿ.ಜಿ.ಖವಟಕೊಪ್ಪ, ಜಿ.ಡಿ.ಕುಲಕರ್ಣಿ, ಆರ್.ಎ.ಗೆನ್ನವರ, ಎಸ್.ಆರ್.ಪಾಟೀಲ, ಕೆ.ಆರ್.ಕೋಠಿವಾಲೆ, ಜಿ.ಎಸ್.ಖಿಚಡೆ, ರಾಜಶ್ರೀ ಪವಾರ, ಬಿ.ಎನ್.ಬಂಡಗಾರ, ಪಿ.ಎಂ.ದರೂರ, ಎ.ಎಂ.ಗೆಜ್ಜೆ, ಬಿ.ಎಸ್.ಪಾಟೀಲ, ಐ.ಎನ್.ಕೋಷ್ಠಿ, ಪಿ.ಎಂ.ಗುಡೋಡಗಿ ಸೇರಿ ಹಿರಿಯ ಮತ್ತು ಕಿರಿಯ ವಕೀಲರಿದ್ದರು.