

ಪಾಂಡವಪುರ: ತಾಲೂಕಿನ ಚಿಕ್ಕಾಡೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ರೈತಸಂಘ-ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸಿ.ಟಿ.ನಾರಾಯಣ ಹಾಗೂ ಲಕ್ಷ್ಮೀ ರಾಮಕೃಷ್ಣ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ರೈತಸಂಘ-ಕಾಂಗ್ರೆಸ್ ಬೆಂಬಲಿತ 5 ಹಾಗೂ ಜೆಡಿಎಸ್ ಬೆಂಬಲಿತ 5 ಮಂದಿ ನಿರ್ದೇಶಕರರು ಹಾಗೂ ಒಬ್ಬ ನಾಮಿನಿ ಸದಸ್ಯ ಸೇರಿ 11 ನಿರ್ದೇಶಕರ ಬಲ ಹೊಂದಿದ್ದು, ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನವಣೆಯಲ್ಲಿ ನಾಮಿನಿ ನಿರ್ದೇಶಕನ ಬೆಂಬಲದೊಂದಿಗೆ ರೈತಸಂಘ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸಿ.ಟಿ.ನಾರಾಯಣ ಅಧ್ಯಕ್ಷರಾಗಿ ಹಾಗೂ ಲಕ್ಷ್ಮೀನಾರಾಯಣ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯದರು.
ಅಧ್ಯಕ್ಷ ಸಿ.ಟಿ.ನಾರಾಯಣ ಮಾತನಾಡಿ, ಚಿಕ್ಕಾಡೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲ ನಿರ್ದೇಶಕರು ಹಾಗೂ ಗ್ರಾಮದ ಮುಖಂಡರಿಗೆ ಅಭಿನಂಧನೆಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ರೈತಸಂಘ ಮಾಜಿ ಅಧ್ಯಕ್ಷ ಹರೀಶ್ ಮಾತನಾಡಿ, ಚುನಾವಣೆಯಲ್ಲಿ ಗೆಲುವು ಸಾಧಿಸುವವರೆಗೆ ಮಾತ್ರ ರಾಜಕೀಯ, ಮುಗಿದ ಬಳಿಕ ಎಲ್ಲರೂ ಜತೆಗೂಡಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. ಸಹಕಾರ ಸಂಘದಲ್ಲಿ ರಾಜಕೀಯ ಮಾಡಿದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ನೂತನ ಅಧ್ಯಕ್ಷರು ಸಂಘದ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಉತ್ತಮ ಆಡಳಿತ ನೀಡಲಿದ್ದಾರೆ ಎಂದು ವಿಸ್ವಾಸ ವ್ಯಕ್ತಪಡಿಸಿದರು.
ನಿರ್ದೇಶಕರಾದ ಸಿ.ಟಿ.ಕೃಷ್ಣಕುಮಾರ್, ಎಚ್.ಪಿ.ಲತಾ, ಸುವರ್ಣಮ್ಮ, ನಾಮಿನಿ ನಿರ್ದೇಶಕ ಸಿ.ಎಂ.ಜಯರಾಮು, ಮುಖಂಡರಾದ ರೈತಸಂಘದ ಮಾಜಿ ಅಧ್ಯಕ್ಷ ಹರೀಶ್, ವಿಜಯೇಂದ್ರ, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀಕಾಂತ್, ಯಜಮಾನ್ ಲೋಕೇಶ್, ಕೃಷ್ಣೇಗೌಡ, ಪ.ವೆಂಕಟೇಶ್ ಗೌಡ, ಸಿ.ಟಿ.ನಾಗರಾಜು, ಕೇಬಲ್ ಹರೀಶ್, ಸಿ.ಆರ್.ರಘು, ಸಿ.ವಿ.ರವಿ, ಸಿ.ಎಂ.ರಾಜಶೇಖರ್, ರಮೇಶ್ ಇತರರಿದ್ದರು.