ಚಿಕ್ಕರೇಷ್ಮ, ಕೊಟೆಮಚ್ಚಿ ಹಾಡಿಯಲ್ಲಿ ಕುಸಿದ ಮನೆ

cheque
Published on


ಸಿದ್ದಾಪುರ: ಚೆನ್ನಯ್ಯಕೊಟೆ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಚಿಕ್ಕರೇಷ್ಮ ಮತ್ತು ಕೊಟೆಮಚ್ಚಿ ಹಾಡಿಯಲ್ಲಿ ಎರಡು ಮನೆಗಳು ಕುಸಿದು ಬಿದ್ದಿವೆ. ಮಂಗಳವಾರ ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಗ್ರಾಮದ ನಿವಾಸಿಗಳಾದ ರಾಜಪ್ಪ ಹಾಗೂ ವಿಠಾಲ ಎಂಬುವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಶ್ರೀಕಾಂತ್, ಸಹಾಯಕ ಲೋಕೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಅಧ್ಯಕ್ಷ ಅರುಣ್ ಕುಮಾರ್, ಗ್ರಾಮದ ಮುಖಂಡ ದೇವರಾಜು, ಗಿರಿಜನ ಮುಖಂಡರ ಸಿದ್ದಪ್ಪ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net