ಚಿಕ್ಕಮಗಳೂರು ವಿಶ್ವದ ಎರಡನೇ ಸುಂದರ ತಾಣ

24 ckm 1
ವಿಜಯವಾಣಿ, ವಿಸ್ಟಾರ್ ಹಾಗೂ ಲುಕ್‌ಬುಕ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಾಯಲ್ ಎನ್‌ಫೀಲ್ಡ್ ಬೈಕ್ ರ‍್ಯಾಲಿಯಲ್ಲಿ ಲಕ್ಕಿ ಡಿಪ್ ಮೂಲಕ ವಿಜೇತರನ್ನು ವಿಸ್ಟಾರ್ ಸಂಸ್ಥೆಯ ಅಪ್ಸರ್ ಅಹಮದ್ ಆಯ್ಕೆ ಮಾಡಿದರು. ಶೃಂಗೇರಿ ಚಂದ್ರಶೇಖರ್, ಲೋಹಿತ್, ನೇತ್ರಾ, ವಿನೋದ್ ಕುಮಾರ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ವಿಶ್ವದಲ್ಲಿಯೇ ಎರಡನೇ ಅತ್ಯಂತ ಸುಂದರ ತಾಣ ಎಂಬ ಖ್ಯಾತಿಗೆ ಚಿಕ್ಕಮಗಳೂರು ಪಾತ್ರವಾಗಿದೆ. ಇಲ್ಲಿನ ಪರಿಸರವನ್ನು ಸಂರಕ್ಷಿಸುವ ಜೊತೆಗೆ ಪ್ರವಾಸೋದ್ಯಮವನ್ನು ವೃದ್ಧಿಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದು ವಿ ಸ್ಟಾರ್ ಸಂಸ್ಥೆ ಮುಖ್ಯಸ್ಥ ಅಪ್ಸರ್ ಅಹಮದ್ ಹಿಂದುಸ್ತಾನಿ ತಿಳಿಸಿದರು.

ವಿಜಯವಾಣಿ ಕನ್ನಡ ದಿನಪತ್ರಿಕೆ, ವಿ ಸ್ಟಾರ್ ಸಂಸ್ಥೆ, ಲುಕ್ ಬುಕ್ ಸಹಯೋಗದಲ್ಲಿ ಚಿಕ್ಕಮಗಳೂರಿನಿಂದ ರಾಜ್ಯದ ಅತ್ಯಂತ ಎತ್ತರದ ಪರ್ವತ ಮುಳ್ಳಯ್ಯನಗಿರಿವರೆಗೆ ಸಂಚಾರಿ ನಿಯಮಗಳ ಜಾಗೃತಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ರಾಯಲ್ ಎನ್ ಫೀಲ್ಡ್ ರ‍್ಯಾಲಿಗೆ ಚಾಲನೆ ನೀಡಿ ಬಳಿಕ ಸೀತಾಳಯ್ಯನಗಿರಿಯಲ್ಲಿ ಲಕ್ಕಿಡಿಪ್ ವಿಜೇತರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ಮಾತನಾಡಿದರು.

ಚಿಕ್ಕಮಗಳೂರು ಜಿಲ್ಲೆ ಅತ್ಯಂತ ಸುಂದರ ಪ್ರವಾಸಿ ತಾಣಗಳನ್ನು ಹೊಂದಿದೆ. ಪ್ರವಾಸೋದ್ಯಮದ ಕಾರಣಕ್ಕೆ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಜಿಲ್ಲೆಯಲ್ಲಿ ನಾವಿz್ದೆÃವೆ ಎನ್ನುವುದು ಹೆಮ್ಮೆಯ ಸಂಗತಿ. ಇಲ್ಲಿನ ರೋಮಾಂಚನಕಾರಿ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಜಿಲ್ಲೆಯ ಪ್ರಗತಿಗೆ ಪೂರಕವಾದ ಕಾರ್ಯಗಳಿಗೆ ತಾವು ಕೈಜೋಡಿಸುವುದಾಗಿ ಭರವಸೆ ನೀಡಿದರು.

ಹನುಮಂತಪ್ಪ ವೃತ್ತದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಲೋಹಿತ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಪ್ರಖ್ಯಾತಿಗೊಳಿಸುವ ನಿಟ್ಟಿನಲ್ಲಿ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಸೈಕಲ್ ರ್ಯಾಲಿ, ಬೈಕ್ ರ್ಯಾಲಿ, ಮ್ಯಾರಥಾನ್ ನಡೆಸುತ್ತಿz್ದÉÃವೆ. ಈ ಮೂಲಕ ಪ್ರವಾಸಿ ತಾಣಗಳನ್ನು ಪ್ರಖ್ಯಾತ ಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರಿಗೆ ಆಗಮಿಸುವ ಜನರು ಇಲ್ಲಿನ ರಮಣೀಯ ತಾಣಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ನೀಡುವಂತಾಗಬೇಕು. ಜಿಲ್ಲೆಯಲ್ಲಿನ ಇನ್ನು ಎಷ್ಟೋ ಪ್ರವಾಸಿ ತಾಣಗಳು ಸಾಕಷ್ಟು ಜನರಿಗೆ ಗೊತ್ತೇ ಇಲ್ಲ. ಅವುಗಳನ್ನು ಜನರಿಗೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ಸ್ಥಾನಿಕ ಸಂಪಾದಕ ಶೃಂಗೇರಿ ಚಂದ್ರಶೇಖರ್, ಟ್ರಾಫಿಕ್ ಪಿಎಸ್‌ಐ ಧನಂಜಯ್, ಲುಕ್ ಬುಕ್ ಸಂಸ್ಥೆಯ ವಿನೋದ್ ಕುಮಾರ್, ರಾಯಲ್ ಎನ್‌ಫೀಲ್ಡ್ನ ನೇತ್ರಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net