ಚಿಕ್ಕಮಗಳೂರು ಜಿಲ್ಲಾಡಳಿತ,ಭದ್ರಾ ಅಧಿಕಾರಿಗಳಿಗೆ ಕೇಂದ್ರ ಸಚಿವ ತಾಕೀತು

1662370688281000000000000000000000000000
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಪೂರ್ಣಕ್ಕೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ವೈ-ಜಂಕ್ಷನ್ ಬಳಿ ಪೊಲೀಸ್ ರಕ್ಷಣೆಯೊಂದಿಗೆ ಕಾಮಗಾರಿ ಪ್ರಾರಂಭಿಸ ಬೇಕೆಂದು ಅಧಿಕಾರಿಗಳಿಗೆ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಅಧಿಕಾರಿ ಗಳಿಗೆ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳ ಕುರಿತು ಸೋಮವಾರ ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ಆ ಭಾಗದ ರೈತರ ಗೊಂದಲದಿಂದಾಗಿ ಯೋಜನೆ ಪ್ರಗತಿಗೆ ಹಿನ್ನಡೆಯಾಗಿದೆ. ಆದ್ದರಿಂದ ಚಿಕ್ಕ ಮಗಳೂರು ಜಿಲ್ಲಾಡಳಿತ ಪೊಲೀಸ್ ರಕ್ಷಣೆ ನೀಡಿ,ಕಾಮಗಾರಿ ಪ್ರಾರಂಭಿಸಲು ಅನುಕೂಲ ಮಾಡಿಕೊಡದಿದ್ದರೆ ಗಂಭೀರವಾಗಿ ಪರಿಗಣಿಸ ಲಾಗುವುದೆಂದು ಎಚ್ಚರಿಸಿದರು.

ಯೋಜನೆ ಮುಖ್ಯಇಂಜಿನಿಯರ್ ಎಂ.ರವಿ ಮಾತನಾಡಿ,ವೈ-ಜಂಕ್ಷನ್ ಕಾಮಗಾರಿಗೆ ಆಭಾ ಗದ ರೈತರ ಅಸಹಕಾರದಿಂದಾಗಿ ಬಾಕಿ ಉಳಿದಿರುವ 1.9 ಕಿ.ಮೀ.ಕಾಲುವೆ ಕಾಮಗಾರಿ ಬಾಕಿ 0.2 ಕಿ.ಮೀ.ಸಮಸ್ಯೆಯನ್ನು ಬಗೆಹರಿಸಲಾಗಿದೆ. 1.7 ಕಿ.ಮೀ. ಕಾಮಗಾರಿಗೆ ಸಂಬಂದಿಸಿದಂತೆ ಐವರು ರೈತರು ಅವಾರ್ಡ್ ನೋಟೀಸ್ ಪಡೆಯದೆ ಕಾಮಗಾರಿ ಆರಂಭಿಸಲು ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು,ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಲಾಗಿದೆ. ಖುದ್ದು ಪರಿಶೀಲಿಸಿ,ಪೊಲೀಸರ ರಕ್ಷಣೆಯೊಂದಿಗೆ ಕಾಮಗಾರಿ ಪ್ರಾರಂಭಿಸುವಂತೆ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ತಾವು ಸೂಚಿಸಿದ್ದರೂ ಕಾಮಗಾರಿ ಪ್ರಾರಂಭಿಸದೇ ಇರುವುದು ಸಾರ್ವಜನಿಕ ವಾಗಿ ಚರ್ಚೆಯಾಗುತ್ತಿದೆ.

ರಾಜ್ಯದ ನೀರಾವರಿ,ಗೃಹ ಸಚಿವರು ಹಾಗೂ ಮುಖ್ಯಕಾರ್ಯದರ್ಶಿ ಗಂಭೀರವಾಗಿ ಈ ವಿಷಯವನ್ನು ಪರಿಗಣಿಸ ಬೇಕು. 2 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಚಿತ್ರದುರ್ಗ,ತುಮಕೂರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸ ಬೇಕೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net