ಚಿಕಿತ್ಸೆಯಿಂದ ಸ್ಕಿಜೋಫ್ರೀನಿಯಾ ಗುಣಮುಖ

bkt-25-2
Published on

ಬಾಗಲಕೋಟೆ: ರೋಗಿಯನ್ನು ಆಸ್ಪತ್ರೆಗೆ ಸೇರಿಸದೇ ಮನೆಯಲ್ಲಿಯೇ ಪರಿಣಾಮಕಾರಿ ಹಾಗೂ ಸರಳ ಔಷಧಿಗಳ ಆವಿಷ್ಕಾರದಿಂದ ಸ್ಕಿಜೋಫ್ರೀನಿಯಾ ರೋಗವನ್ನು ಗುಣಪಡಿಸಬಹುದಾಗಿದೆ ಎಂದು ಮನೋರೋಗ ತಜ್ಞರಾದ ಡಾ.ರವಿ ಸಿ.ಎ ಹೇಳಿದರು.

ನವನಗರದ ಜಿಲ್ಲಾ ಕಾರಗೃಹದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್, ಅಬಕಾರಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಶಿಕ್ಷಣ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣ ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿ ಅವರು ಮಾತನಾಡಿದರು.

ಸ್ಕಿಜೋಫ್ರೀನಿಯಾ ಒಂದು ಮಾನಸಿಕ ಕಾಯಿಲೆ ಆಗಿದೆ. ಇದು ಟಿಬಿ, ಜ್ವರ, ಮಲೇರಿಯಾ, ಚಿಕನ್‍ಗುಣ್ಯ, ಡೆಂಗ್ಯೂ ಸೇರಿದಂತೆ ಇತರೆ ಕಾಯಿಲೆಗಳು ಬಂದಾಗ ಗೊತ್ತಾಗುತ್ತದೆ. ಆದರೆ ಈ ಕಾಯಿಲೆ ಬಂದಿರುವುದೇ ಗೊತ್ತಾಗುವದಿಲ್ಲ. ಈ ಕಾಯಲೆ ಕಣ್ಣಿಗೆ ಕಾಣುವದಿಲ್ಲ. ಆದರೆ ವ್ಯಕ್ತಿಯ ನಡವಳಿಕೆ ಮೇಲೆ ಕಾಯಿಲೆ ಗುರುತಿಸಬಹುದಾಗಿದೆ. ಮೆದುಳಿಗೆ ಸಂಬಂಧಿಸಿದ ಕಾಯಿಲೆ ಇದಾಗಿರುವದರಿಂದ ಮಾನಸಿಕ ಅಸಮತೋಲದದಿಂದ ಇಂತಹ ಕಾಯಿಲೆಗಳು ಬರುತ್ತವೆ ಎಂದು ತಿಳಿಸಿದರು.
ಜಗತ್ತಿನಲ್ಲಿ 600 ಸಾವಿರ ಕೋಟಿ ಜನಸಂಖ್ಯೆಗೆ 24 ಮಿನಿಯನ್ ಕೋಟಿಯಷ್ಟು ಈ ಈ ರೋಗದಿಂದ ಬಳಲುತ್ತಿದ್ದಾರೆ. ಭಾರತದಲ್ಲಿ 0.4 ಮಿಲಿಯನ್ ಕೋಟಿಯಷ್ಟು ರೋಗಿಗಳಿದ್ದಾರೆ. ಈ ರೋಗಕ್ಕೆ ತುತ್ತಾದರೆ ವಾಸಿಯಾಗುವದಿಲ್ಲವೆಂಬ ತಪ್ಪು ತಿಳುವಳಿಕೆ ಜನರಲ್ಲಿ ಭಾವನೆ ಮೂಡಿದೆ. ಇದನ್ನು ಹೋಗಲಾಡಿಸುವ ಉದ್ದೇಶದಿಂದ ವಿಶ್ವ ಸ್ಕಿಜೋಫ್ರೀನಿಯಾ ದಿನಾಚರಣೆ ಆಚರಿಸಲಾಗುತ್ತಿದೆ. ಅದಕ್ಕಾಗಿ ಜನ ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಕುಷ್ಟರೋಗ ಮತ್ತು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಎಸ್.ಸಿ.ಪಾಟೀಲ ಮಾತನಾಡಿ ನಮ್ಮ ಪಂಚ್ರೇಂದ್ರಿಗಳ ಹಾಗೂ ಮೆದುಳಿದ ನಡುವಿನ ವ್ಯತ್ಯಾಸದಿಂದ ಇಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಒಂದು ವಾರ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಮಾನಸಿಕ ಕಾಯಿಲೆ ಬಗ್ಗೆ ಟೆಲಿ ಮನಸ್‍ಗೆ (14416ಗೆ) ಕರೆ ಮಾಡಿ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕಾರಾಗೃಹದ ಅಧೀಕ್ಷಕ ಶರಣ ಬಸಪ್ಪ ಮಾತನಾಡಿ ಒತ್ತಡಕ್ಕೆ ಒಳಗಾಗುವರು ಈ ರೋಗಕ್ಕೆ ತುತ್ತಾಗುತ್ತಿದ್ದು, ಇದರಿಂದ ಬಹಳ ಕಿನ್ನತೆಗೆ ಒಳಗಾಗುತ್ತಿದ್ದಾರೆ. ಖೈದಿಗಳಲ್ಲಿ ಈ ಪರಿಸ್ಥಿತಿಯಲ್ಲಿ ನೋಡುತ್ತಿದ್ದು, ಅಂತಹ ವ್ಯಕ್ತಿಗಳಿಂದ ಇತರ ವ್ಯಕ್ತಿಗಳಿಗೆ ತೊಂದರೆಯಾಗುವ ಸಂಭವವಿದ್ದು, ಅಂತವರನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕಿದೆ. ಇಂತಹ ಕಾರ್ಯಕ್ರಮಗಳು ಜೈಲು ಖೈದಿಗಳಿಗೆ ಅನುಕೂಲವಾಗಲಿದೆ. ಇದೇ ರೀತಿಯ ಇತರೆ ಕಾರ್ಯಕ್ರಮಗಳನ್ನು ಕಾರಾಗೃಹದಲ್ಲಿ ಹಮ್ಮಿಕೊಳ್ಳಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಬಕಾರಿ ಸೂಪರಿಟೆಂಡೆಂಟ್ ಕಾಂತೇಶ ಕಮತರ, ಶಿಕ್ಷಣ ಆರ್.ಆರ್.ಪಾಟೀಲ, ವೈದ್ಯಾಧಿಕಾರಿ ಡಾ.ಆನಂದ ಕುಚನೂರ, ಜೈಲರ್ ಎಸ್.ಡಿ.ಸುಣಗದ, ಶುಶ್ರೂಷಾಧಿಕಾರಿ ಎ.ಎಂ.ಭದ್ರಣ್ಣವರ, ಗೌರಿಗಣೇಶ ಸಂಸ್ಕøತಿ ಸಂಘದ ಪವಿತ್ರಾ ಜಕ್ಕಣ್ಣವರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net