

ಧಾರವಾಡ: ಇತ್ತೀಚಿನ ದಿನಗಳಲ್ಲಿ ಮನುಷ್ಯರಲ್ಲಿ ಒತ್ತಡದಿಂದ ಮÁನಸಿಕ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಈ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಕಾಯಿಲೆಯ ಲಕ್ಷಣಗಳನ್ನು ಮೊದಲೇ ಗುರುತಿಸಿ ಚಿಕಿತ್ಸೆಗೆ ಮುಂದಾಗಬೇಕು. ಚಿಕಿತ್ಸೆಯ ಅನುಸರಣೆಯಲ್ಲಿ ಕುಟುಂಬದವರ ಪಾತ್ರ ಪ್ರಮುಖವಾದುದು ಎಂದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸ್ವರೂಪ.ಟಿ.ಕೆ ಹೇಳಿದರು.
ವಿಶ್ವ ಸ್ಕಿಜೋಫ್ರೇನಿಯಾ ದಿನದ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಽಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯÁಽÃಶ ಪರಶುರಾಮ ದೊಡಮನಿ ಮÁತನಾಡಿ, ಸಿಟ್ಟು, ಉದ್ವೇಗ ಹಾಗೂ ಮÁನಸಿಕ ತೊಂದರೆಗಳು ದೈನಂದಿನ ಕಾರ್ಯಗಳಲ್ಲೂ ಮನುಷ್ಯನನ್ನು ಬಾಽಸುತ್ತಿವೆ. ಉತ್ತಮ ಜೀವನ ಶೈಲಿ ಹಾಗೂ ಸಕಾರಾತ್ಮಕ ಯೋಚನೆಗಳನ್ನು ಅಳವಡಿಸಿಕೊಂಡರೆ ಮನಸ್ಸು ಸದೃಢÀವಾಗಿರಬಲ್ಲದು ಎಂದರು.
ಡಿಎಚ್‌ಒ ಡಾ. ಶಶಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಿಮ್ಹಾನ್ಸ್ ನಿರ್ದೇಶಕ ಡಾ. ಮಹೇಶ ದೇಸಾಯಿ ಅತಿಥಿಯಾಗಿ ಪಾಲ್ಗೊಂಡಿದ್ದರು.
ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ ಸ್ಕಿಜೋಫ್ರೇನಿಯಾ ಕುರಿತು ಜಾಗೃತಿ ಮೂಡಿಸಿತು.
ಮÁನಸಿಕ ಆರೋಗ್ಯ ವಿಭಾಗದ ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಽಕಾರಿ ಹಾಗೂ ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಽಕಾರಿ ಡಾ. ಎಸ್.ಬಿ. ಕಳಸೂರಮಠ, ಜಿಲ್ಲಾ ಶಸ್ತçಚಿಕಿತ್ಸಕ ಡಾ. ಶಿವಕುಮÁರ ಮÁನಕರ, ಜಿಲ್ಲಾ ಸಮೀಕ್ಷಣಾ ಅಽಕಾರಿ ಡಾ. ಸುಜಾತಾ ಹಸವಿಮಠ, ರೋಗವಾಹಕ ಆಶ್ರಿಢ ರೋಗಗಳ ಜಿಲ್ಲಾ ನಿಯಂತ್ರಣಾಽಕಾರಿ ಡಾ. ಮಂಜುನಾಥ ಸೊಪ್ಪಿಮಠ, ಇತರರಿದ್ದರು.