ಚಿಕಿತ್ಸೆಗೆ ಆರ್ಥಿಕ ಸಹಕಾರ ನೀಡಿ

5 mbl ph 1
Published on

ಮುಳಬಾಗಿಲು: ಮನೆ ಕೆಲಸ ಮಾಡುತ್ತಿದ್ದ ಮುಳಬಾಗಿಲಿನ ಕುಂಬಾರಪಾಳ್ಯದ ಸುನಂದಮ್ಮ ಅವರ ಮಗ ನಟರಾಜ್ (29) ಬಿಪಿ ಮತ್ತು ಸಕ್ಕರೆ ಕಾಯಿಲೆಯಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆ ವೆಚ್ಚ ಭರಿಸಲಾಗದೆ ಸಂಕಷ್ಟದಲ್ಲಿದ್ದಾರೆ. ಈಗಾಗಲೆ ಆನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. 6 ಲಕ್ಷ ರೂ. ಆಸ್ಪತ್ರೆ ವೆಚ್ಚ ಪಾವತಿಸಬೇಕಾಗಿದ್ದು, ಆಸ್ಪತ್ರೆಯವರು ರಿಯಾಯಿತಿ ನೀಡಿ 3.87 ಲಕ್ಷ ರೂ. ನೀಡಲು ತಿಳಿಸಿದ್ದಾರೆ. ಪ್ರಸ್ತುತ ಹಣವಿಲ್ಲದೆ ಮಗನನ್ನು ಆಸ್ಪತ್ರೆಯಿಂದ ಕರೆದುಕೊಂಡು ಬರಲು ಸಾಧ್ಯವಾಗದ ಸ್ಥಿತಿಯಲ್ಲಿ ಸುನಂದಮ್ಮ ಇದ್ದಾರೆ. ಇವರಿಗೆ ಆರ್ಥಿಕ ಸಹಕಾರ ಮಾಡಲು ಬಯಸುವವರು ‘ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮುಳಬಾಗಿಲು ಖಾತೆ ಸಂಖ್ಯೆ: 10758101032644, ಐಎಫ್‌ಎಸ್‌ಸಿ ಕೋಡ್: ಪಿಕೆಜಿಬಿ0010758’ ಗೆ ಹಣ ಜಮಾ ಮಾಡಬಹುದು.

ತಾಲೂಕಿನ ಶಾಸಕರೂ ಆಗಿರುವ ಸಚಿವ ಎಚ್.ನಾಗೇಶ್ ಮೂಲಕ ಸರ್ಕಾರದ ಗಮನಕ್ಕೆ ತಂದು ಬಡಕುಟುಂಬದ ಆರೋಗ್ಯ ಸೇವೆಗೆ ಸರ್ಕಾರ ಮತ್ತು ಜಿಲ್ಲಾಡಳಿತದ ಕಡೆಯಿಂದ ನೆರವು ಒದಗಿಸಲಾಗುವುದು. ಎ.ವಿ.ಶ್ರೀನಿವಾಸ್ ತಾಪಂ ಅಧ್ಯಕ್ಷ ಮುಳಬಾಗಿಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net