ಚಿಕಿತ್ಸೆ ಫಲಿಸದೆ ಬೈಕ್​ ಸವಾರ ಸಾವು

18Nagar1 CRIME
Published on

ನಾಗರಮುನ್ನೋಳಿ: ಬೈಕ್​&ಲಾರಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್​ ಸವಾರ ಗ್ರಾಮದ ರುದ್ರಪ್ಪ ತಮ್ಮಣ್ಣ ಚೌಗಲಾ (38) ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈಚೆಗೆ ರಾಯಬಾಗದಿಂದ ನಾಗರಮುನ್ನೋಳಿಗೆ ತೆರೆಳುತ್ತಿರುವ ವೇಳೆ ಅಪಘಾತ ಸಂಭವಿಸಿ ಬೈಕ್​ನಲ್ಲಿದ್ದ ಇಬ್ಬರು ಗಂಭಿರ ಗಾಯಗೊಂಡು ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಲಿಸದೆ ಗುರುವಾರ ಹಿಂಬದಿ ಸವಾರ ಸಾವನ್ನಪ್ಪಿದ್ದ. ಶುಕ್ರವಾರ ಬೈಕ್​ ಸವಾರನು ಸಾವನ್ನಪ್ಪಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡ ರಾಯಬಾಗ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net