ಚಿಕಿತ್ಸೆ ಫಲಿಸದೆ ಗಾಯಗೊಂಡಿದ್ದ ಬಾಲಕಿ ಸಾವು

Crime Logo
Published on

ಕೊಳ್ಳೇಗಾಲ: ತಾಲೂಕಿನ ಕಾಮಗೆರೆ ಗ್ರಾಮದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ಸುಟ್ಟು ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾಳೆ.

ಕಾಮಗೆರೆ ಗ್ರಾಮದ ಹುಣಸೆ ಮರದ ಕಾಲನಿಯ ನಿವಾಸಿ ಕೆಂಪರಾಜು ಮತ್ತು ನಾಗಮಣಿ ದಂಪತಿಗಳ ಪುತ್ರಿ ಮಮತಾ (16) ಮೃತ ಬಾಲಕಿ. 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಮಮತಾ ಜ.6 ರಂದು ಮನೆಯಲ್ಲಿ ಗ್ಯಾಸ್ ಸ್ಟೌ ಹಚ್ಚುಲು ಮುಂದಾಗಿದ್ದಳು. ಅದಗಾಲೇ ಗ್ಯಾಸ್ ಸೋರಿಕೆಗೊಂಡಿದ್ದನು ಅರಿಯದ ಬಾಲಕಿ ಬೆಂಕಿ ಹಚ್ಚಿದ ಪರಿಣಾಮ ಸುಟ್ಟು ಗಾಯಗೊಂಡಿದ್ದಳು. ತಕ್ಷಣ ಮಮತಾಳನ್ನು ಚಾಮರಾಜನಗರ ಜಿಲ್ಲಾ ವೈದ್ಯಕೀಯ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಈ ಸಂಬಂಧ ಕೊಳ್ಳೇಗಾಲ ಗ್ರಾ ಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net