ಚಿಕನ್ ಕೊಡ್ಲಿಲ್ಲವೆಂದು ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ

Asha Worker
Published on

ಆಳಂದ: ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯಿಂದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆದ ಘಟನೆ ತಾಲೂಕಿನ ಕಿಣ್ಣಿಅಬ್ಬಾಸ್ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.
ರೇಣುಕಾ ಕುಡಕಿ ಹಲ್ಲೆಗೊಳಗಾದ ಆಶಾ ಕಾರ್ಯಕತರ್ೆ. ತೀವ್ರ ಗಾಯಗೊಂಡಿದ್ದ ರೇಣುಕಾ ಅವರನ್ನು ಆಳಂದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕಿಣ್ಣಿ ಅಬ್ಬಾಸ್ ಗ್ರಾಮದ ಸಕರ್ಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಮುಂಬೈನಿಂದ ಬಂದ ವಲಸಿಗರನ್ನು ಇಡಲಾಗಿತ್ತು. ಇದರಲ್ಲಿ ಸೋಮನಾಥ ಕಾಂಬಳೆ ಎಂಬುವವರು ಶುಕ್ರವಾರ ಚಿಕನ್ ಊಟ ನೀಡಿ, ಮಕ್ಕಳಿಗೆ ಚಿಪ್ಸ್ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರದಲ್ಲಿದ್ದ ಆಶಾ ಕಾರ್ಯಕತರ್ೆ ರೇಣುಕಾ ಅವರು ಆಹಾರ ಸರಬರಾಜು ಅಧಿಕಾರಿಗಳು ಮಾಡುತ್ತಾರೆ. ನಿಮ್ಮ ಬೇಡಿಕೆಯನ್ನು ಅಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಸೋಮನಾಥ ಹಾಗೂ ಕುಟುಂಬದವರು ರೇಣುಕಾ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಕುರಿತು ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಸೋಮನಾಥ ಸೇರಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net