ಚಿಂತೆ ಮಾಡದೆ ನಗುನಗುತಲಿರಿ

25Aurad01
ಔರಾದ್ ತಾಲೂಕಿನ ಸಂತಪುರದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಫಾದರ್ ಕ್ಲಿವನ್ ಗೊಮ್ಸ್ ಮಾತನಾಡಿದರು. ಡಾ.ಪ್ರವೀಣ್, ಫಾ.ವಿಜಯ, ಸಿಸ್ಟರ್ ರೀಮಾ, ಸಿಸ್ಟರ್ ಲಿನೆಟ್, ಸಿಸ್ಟರ್ ಶಕುಂದಾ, ಚಂದ್ರಕಾಂತ, ಕವಿತಾ, ರಫೀದ್, ನಾಗನಾಥ ಇತರರಿದ್ದರು.
Published on

ಔರಾದ್: ಮಾನಸಿಕ ಆರೋಗ್ಯ ಕಾಪಾಡಲು ಅನೇಕ ಗಂಟೆ ವಿನಿಯೋಗಿಸುವ ಅಗತ್ಯವಿಲ್ಲ. ನಿತ್ಯದ ನಮ್ಮ ಯೋಚನೆ, ಭಾವನೆ ಮತ್ತು ವರ್ತನೆ ಹೇಗಿದೆ? ಅವುಗಳ ಮೂಲ ಎಲ್ಲಿದೆ ಮತ್ತು ಏನನ್ನು ಸರಿಪಡಿಸಿಕೊಳ್ಳಬೇಕು ಎಂಬ ಆತ್ಮಾವಲೋಕನ ಮಾಡಿಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಸಂತಪುರ ಹೋಲಿ ಕ್ರಾಸ್ ಚರ್ಚ್ ಸಹ ನಿರ್ದೇಶಕ ಫಾದರ್ ಕ್ಲಿವನ್ ಗೊಮ್ಸ್ ನುಡಿದರು.

ಹುಮನಾಬಾದ್‌ನ ಆರ್ಬಿಟ್ ಮತ್ತು ಲಿವ್ ಲವ್ ಲಾಫ್ ಸಮಾಜ ಸೇವೆ ಸಂಸ್ಥೆಗಳ ಸಹಯೋಗದಡಿ ಸಂತಪುರದ ದೀಪಾಲಯ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಮಾನಸಿಕ ಸದೃಢರಾಗಿರಲು ಪ್ರತಿಯೊಬ್ಬರೂ ತನಗೋಸ್ಕರ ದಿನದಲ್ಲಿ ೧೦-೧೫ ನಿಮಿಷ ಸ್ವಯಂ ಚಿಂತನೆಗೆ ಮೀಸಲಿಡಬೇಕು. ಮಾನಸಿಕ ರೋಗಿಗಳು ಮೂಢನಂಬಿಕೆಗೆ ಬಲಿಯಾಗದೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಚಿಂತೆಯೇ ಚಿತೆಗೆ ಮೂಲ ಕಾರಣವಾಗಿದ್ದರಿಂದ ಯಾವುದೇ ರೀತಿಯ ಚಿಂತೆ ಮಾಡದೆ ನಗುನಗುತ ಕಾಲ ಕಳೆಯಬೇಕು ಎಂದು ಸಲಹೆ ನೀಡಿದರು.

ಹೆಡಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರವೀಣಕುಮಾರ್ ಮಾತನಾಡಿ, ಮಾನಸಿಕ ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಸುತ್ತಲಿನ ಕಳಂಕ ಕಡಿಮೆ ಮಾಡಲು ಎಲ್ಲರೂ ಪಣ ತೊಡಬೇಕು. ಸ್ವಸ್ಥ, ಸುಖಮಯ, ಆರೋಗ್ಯಕರ ಮತ್ತು ಸಂತೋಷದ ಜೀವನ ಎಂಬ ಧ್ಯೇಯವಾಕ್ಯದೊಂದಿಗೆ ವಿಶ್ವದಾದ್ಯಂತ ಮಾನಸಿಕ ಆರೋಗ್ಯ ಸೇವೆಗಳ ಗುಣಮಟ್ಟ ಸುಧಾರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಆರ್ಬಿಟ್ ಸಹ ನಿರ್ದೇಶಕ ಫಾ.ವಿಜಯ ಮಾತನಾಡಿದರು. ಮರಿಯಾ ಕ್ರಪಾ ಮುಖ್ಯಸ್ಥೆ ಸಿಸ್ಟರ್ ರೀಮಾ, ದೀಪಾಲಯ ಸಮಾಜ ಸೇವೆ ಸಂಸ್ಥೆ ಸಹ ನಿರ್ದೇಶಕಿ ಸಿಸ್ಟರ್ ಲಿನೆಟ್, ಸಿಸ್ಟರ್ ಶಕುಂದಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಚಂದ್ರಕಾಂತ, ಕವಿತಾ, ರಫೀದ್, ಬಬನ್, ಶಿವಕುಮಾರ, ಸಂಗೀತಾ ಇತರರಿದ್ದರು. ಸುಂದರರಾಜ ಸ್ವಾಗತಿಸಿದರು. ಸುಭಾಷ ಮಾನಕಾರಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net