ಚಿಂತನಹಳ್ಳಿ ಶಾಲೆ ಛಾವಣಿ ಪದರು ಕುಸಿತ

ydg5
ಚಿಂತನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಜ್ಞಾನ ಪ್ರಯೋಗಾಲಯದ ಮೇಲ್ಛಾವಣಿ ಪದರು ಕುಸಿದು ಬಿದ್ದಿರುವುದು.
Published on

ಗುರುಮಠಕಲ್: ಚಿಂತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಛಾವಣಿ ಪದರು ಗುರುವಾರ ಕುಸಿದು ವಿಜ್ಞಾನ ಪ್ರಯೋಗಾಲಯದಲ್ಲಿದ್ದÀ ಪೀಠೋಪಕರಣಗಳು ದ್ವಂಸಗೊAಡಿವೆ. ನೂತನ ಕೊಠಡಿ ಹಸ್ತಾಂತರಿಸಿದ ವರ್ಷದೊಳಗೆ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

ಕೆಕೆಆರ್‌ಡಿಬಿ ಯೋಜನೆ ಅಡಿ 2022-23ರಲ್ಲಿ ನಿರ್ಮಿಸಿದ ನಾಲ್ಕು ಕೊಠಡಿಗಳನ್ನು ನ.2ರಂದು ಶಾಸಕ ಶರಣಗೌಡ ಕಂದಕೂರ ಉದ್ಘಾಟಿಸಿದ್ದರು. ಕಾಮಗಾರಿಯನ್ನು ನಿರ್ಮಿತಿ ಕೇಂದ್ರದವರು ಪೂರ್ಣಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಛಾವಣಿ ಪದರು ಕುಸಿದು ಎರಡು ದಿನವಾದರೂ ಶಾಲೆಯತ್ತ ಸುಳಿಯದ ಗುತ್ತಿಗೆದಾರರ ನಡೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಎಂದಿನAತೆ ಶಾಲೆಯಲ್ಲಿ ತರಗತಿ ನಡೆಯುತ್ತಿತ್ತು. ಮಧ್ಯಾಹ್ನ ಊಟದ ವೇಳೆ ಪ್ರಯೋಗಾಲಯದ ಛಾವಣಿಯ ಸಿಮೆಂಟ್ ಪದರು ಕುಸಿದು ಬೆಂಚ್ ಧ್ವಂಸಗೊAಡಿದೆ. ಪ್ರಯೋಗಾಲಯಕ್ಕೆ ಬೀಗ ಹಾಕಿ ಶಿಕ್ಷಕರು ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕಾಗಿ ಪಸಪುಲ್‌ಗೆ ತೆರಳಿದ್ದರಿಂದ ಅನಾಹುತ ತಪ್ಪಿದೆ.

ಸುದ್ದಿ ಕೇಳಿ ಸ್ಥಳಕ್ಕೆ ದೌಡಾಯಿಸಿದ ಜಯ ಕರ್ನಾಟಕ ಸಂಘಟನೆಯವರು ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕಿಡಿಕಾರಿ ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ದೂರಿದರು. ಛಾವಣಿ ಪದರು ಕುಸಿದ ವೇಳೆ ಮಕ್ಕಳಿದ್ದರೆ ಏನು ಗತಿ? ಮುಂದಿನ ದಿನಗಳಲ್ಲಿ ಶಾಸಕರು ಉತ್ತಮ ಗುಣಮಟ್ಟ ಕಾಯ್ದುಕೊಂಡು ಹೋಗುವ ಗುತ್ತಿಗೆದಾರರಿಗೆ ಕೆಲಸ ಒಪ್ಪಿಸಬೇಕು. ಕಳಪೆ ಕೆಲಸ ಮಾಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಶಿಫಾರಸು ಮಾಡಬೇಕು ಎಂದು ಸಂಘಟನೆ ಅಧ್ಯಕ್ಷ ನಾಗೇಶ ಗದ್ದಗಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net