

ಬಸವಕಲ್ಯಾಣ: ವಿದ್ಯಾರ್ಥಿಗಳ ಆಂತರ್ಯದಲ್ಲಿ ಚಿಂತನ ಮಂಥನಗಳ ಪ್ರವಾಹ ನಿರಂತರವಾಗಿ ಹರಿಯುತ್ತಿದ್ದರೆ ಅದ್ಭುತ ಪ್ರತಿಭೆಗಳ ಸೃಷ್ಟಿ ಸಾಧ್ಯ ಎಂದು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಹಾರಕೂಡದ ಶ್ರೀ ಗುರುಲಿಂಗ ಶಿವಾಚಾರ್ಯ ಉಚಿತ ವಸತಿ ಶಾಲೆ ೨೦೧೦ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ನಿಮಿತ್ತ ಹಾರಕೂಡ ಶ್ರೀಗಳ ಗುರುವಂದನೆ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಜನೆಗೆ ವಿನಯಶೀಲತೆ ಅಡಿಪಾಯ. ವಿದ್ಯೆಯ ಜತೆ ವಿನಯವು ಬೆಳೆಯಬೇಕು ಎಂದರು.
ಶಕ್ತಿ ಸಾಕಾರಗೊಳಿಸಿಕೊಳ್ಳುವ ಶಕ್ತಿ ಪ್ರತಿ ವಿದ್ಯಾರ್ಥಿಯಲ್ಲೂ ಇರುತ್ತದೆ. ಆಂತರ್ಯದಲ್ಲಿ ಹುದುಗಿದ ಅದ್ಭುತ ಶಕ್ತಿ ಪ್ರಕಟಗೊಳ್ಳಲು ಸತತ ಮತ್ತು ಸರಿಯಾದ ಪರಿಶ್ರಮದ ಇಚ್ಛಾಶಕ್ತಿ ಹೊಂದಿರಬೇಕು. ವಸತಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು, ಸಂಸ್ಕಾರದ ಕೊರತೆಯಿಂದ ಬಳಲುವುದಿಲ್ಲ. ವೈಯಕ್ತಿಕ ಸಾಧನೆಯಿಂದ ಸಮಾಜದ ಒಳಗಾಗಿ, ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಅಣಿಯಾಗಬೇಕು ಎಂದರು.
ವಿಜಯಕುಮಾರ ನಾಗವಾರ, ನಾಗನಾಥ ಅಭಿಪ್ರಾಯ ವ್ಯಕ್ತಪಡಿಸಿದರು. ಹಳೇ ವಿದ್ಯಾರ್ಥಿಗಳಾದ ನಾಗೇಶ ಇನಾಮತೆ, ಸಾಯಿಶಂಕರ ಕಾಳಗಿ, ಆಫ್ರೀನ್ ಖಾಸಿಂಸಾಬ್, ಮಹಾದೇವ ದೇಗಾಂವ, ಶರಣು ಧಮದೆ, ಶಿವಾಜಿ ಸಿರಗಾಪುರ ಮಾತನಾಡಿದರು.
ಪ್ರಮುಖರಾದ ಮಲ್ಲಿನಾಥ ಹಿರೇಮಠ ಹಾರಕೂಡ, ಶಿವಶರಣಯ್ಯ ಕಂಬಳಿಮಠ, ಪಂಡಿತ ಪೂಜಾರಿ, ಪರಮೇಶ್ವರ ಹೊಳಕುಂದೆ, ಭೀಮಶಾ ಜೋಜನ್, ಸುಭಾಷ ರೆಡ್ಡಿ, ಅಲ್ಲಮಪ್ರಭು ಹಿರೇಮಠ, ತಾನಾಜಿ, ಕಮಲಾಕರ ಹತ್ತರಗಾ, ದಿಲೀಪ ಕಾಲೋಜಿ, ಪಂಡಿತ ಬಿರಾದಾರ, ವಿಠ್ಠಲ ಹೂಗಾರ, ಚನ್ನವೀರ ದೇವಣಗಾಂವ, ವೀರೇಶ ಠಮಕೆ, ಪ್ರವೀಣರೆಡ್ಡಿ, ಚನ್ನವೀರ ಮಠಪತಿ, ಆಕಾಶ ಸೈದಾಪುರೆ, ನವೀನ ಕಾಳಗಿ, ಚನ್ನವೀರ ಅಂಬಲಗಿ, ರಮೇಶ ಪೀರಜೆ, ಜಗದೀಶ ಗುಂಡುರ, ಬಸವರಾಜ ಪೂಜಾರಿ, ನಾಗೇಶ ಮಠಪತಿ, ಅಂಬರೀಶ ದೇಗಾಂವ ಇತರರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನೆ ಗೀತೆ ನಡೆಸಿಕೊಟ್ಟರು. ಅಶ್ವಿನಿ ಅಂಬರೀಶ ಬಿರಾದಾರ ನಿರೂಪಣೆ ಮಾಡಿದರು. ಸುಧಾರಾಣಿ ಹಾರಕೂಡೆ ಸ್ವಾಗತಿಸಿದರು.